ಮಾತುಗಳು ಮೌನವಾದಾಗ!

ಮನುಷ್ಯ ಕೂಡ ಪ್ರಕೃತಿಯ ಭಾಗವೇ. ಕೆಲವೊಮ್ಮೆ ಪ್ರಾಕೃತಿಕ ಅಸಮತೋಲನೆ, ಮತ್ತು ಬದಲಾವಣೆಗಳು ವ್ಯಕ್ತಿಯ ಮೇಲೆ ಪರಿಣಾಮಕಾರಿ ಪ್ರಭಾವ ಬೀರುತ್ತದೆ. ಆ ಪ್ರಾಕೃತಿಕ ಬದಲಾವಣೆಗೆ ತಕ್ಕಂತೆ ವ್ಯಕ್ತಿ, ವ್ಯಕ್ತಿತ್ವಗಳು ಬದಲಾಗುವುದು ಸಹಜವೇ. ಇವೆಲ್ಲವೂ ಜಗದ ನಿಯಮ ಕೂಡ.

ಈ ಪ್ರಕೃತಿಯಲ್ಲಿ ಮನುಷ್ಯ-ಪ್ರಾಣಿಗೆ ಮಾತ್ರ ಅವರದೇ ಆದ ವಿಭಿನ್ನ ಭಾವನೆಗಳು, ಕಲ್ಪನೆಗಳು, ಆಶಯಗಳು, ಪ್ರೀತಿ-ನಿರೀಕ್ಷೆಗಳು, ಮತ್ತು ಅಭಿಪ್ರಾಯಗಳು ಮೂಡಿರುತ್ತವೆ. ಇವೆಲ್ಲವು ಕೆಲವರಲ್ಲಿ ತಮಗೆ ಅರಿವಿಲ್ಲದೆ ಮಿತಿಮೀರಿ ಇರುತ್ತವೆ.

ಆ ಮಿತಿಮೀರಿದ ಗುಣಗಳ ಜೊತೆಗೆ ಎಲ್ಲೇ ಮೀರಿದ ಕೋಪ, ದ್ವೇಷ, ಅಸೂಯೆ, ಆಕ್ರೋಶ, ದುರಹಂಕಾರ ಮತ್ತು ಸ್ವಾರ್ಥ ಎಂಬ ವಿಲಕ್ಷಣ-ಗುಣಗಳು ಜೊತೆಗೂಡಿರುತ್ತವೆ. ಆಗ ಅವರಿಗೆ ಬೇರೆಯವರ ಭಾವನೆ, ಮತ್ತು ಆಶಯಗಳ ಬಗ್ಗೆ ಆಲೋಚನೆ ಮಾಡುವ ಸಾಮರ್ಥ್ಯವೇ ಇರುವುದಿಲ್ಲ. ಬದಲಾಗಿ, ತನ್ನ ವಿಲಕ್ಷಣ-ಗುಣದ ಬಣ್ಣಗಳನ್ನು ಬೇರೆಯವರ ಮುಖಕ್ಕೆ ಬಳೆದು ಆ ವ್ಯಕ್ತಿ ಮತ್ತು ವ್ಯಕ್ತಿತ್ವದ ಜೊತೆ ಚೆಲ್ಲಾಟವಾಡುತ್ತಾರೆ. ಅರಿವಿಲ್ಲದ ಈ ನಡವಳಿಕೆಗಳು ಅದೆಷ್ಟೋ ಸ್ನೇಹ ಸಂಬಂಧಗಳ ಬಿರುಕಿಗೆ ಕಾರಣಗಳಾಗಿವೆ ಕೂಡ.

ತನ್ನವರೇ ತನ್ನ ವ್ಯಕ್ತಿತ್ವದ ಮೇಲೆ ದಾಳಿ ಮಾಡಿದರೆ ಒಮ್ಮೆ ಪ್ರತಿರೋಧ, ಮತ್ತು ಪ್ರತಿದಾಳಿ ಸಹಜವಾಗಿ ಬರುತ್ತದೆ. ಆದರೆ, ನಿರಂತರವಾಗಿ ಭಾವನೆಗಳಿಗೆ ಪೆಟ್ಟು ಬಿದ್ದರೆ ತನ್ನ ಸಹಜ ನಡೆ, ಮತ್ತು ಮಾತುಗಳು "ಮೌನ" ವಾಗಿ ಬದಲಾಗುತ್ತದೆ.

ಮಾತುಗಳು ಮೌನವಾದಾಗ, ಒಂದು ಬೇರೆ ವ್ಯಕ್ತಿತ್ವದ ಬದಲಾವಣೆ ಕಾಣಸಿಗುತ್ತದೆ. ಇದು ಸಹ ಪ್ರಕೃತಿಯ ನಿಯಮವೇ ಸರಿ.

- ರಾಘವೇಂದ್ರ. ಜಿ. ಶ್ರೀರಾಮಯ್ಯ


Comments

Post a Comment

ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ

Popular posts

ಹೇಗಿದ್ದಾರೆ ಮೇಷ್ಟ್ರು..?

ಬಡಿದೆಬ್ಬಿಸಿ ಕೇಳಬೇಕು ಗಾಂಧೀಜಿ ಯನ್ನ

ಸಾರ್ಥಕ ನಿವಾಸ

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಅಮುಲ್ ಗೆ ವಿರೋಧವೇಕೆ, ನಂದಿನಿ ಗೆ ಬೆಂಬಲ ಬೇಕೆ?

ದೃಢ ನಿರ್ಧಾರ, ದೃಢ ಮನಸ್ಸು

ಮನೋಜ್ಞ ಮಾದರಿ

ನಾ ಕೊಳ್ಳುವ ಮಾಂಸದಂಗಡಿ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸ್ನೇಹಿತನ ಸಹಾಯ ಉಪಯೋಗಿಸಿಕೊಳ್ಳಿ, ಸ್ನೇಹಿತನನ್ನಲ್ಲ!