ಮಾತುಗಳು ಮೌನವಾದಾಗ!
ಮನುಷ್ಯ ಕೂಡ ಪ್ರಕೃತಿಯ ಭಾಗ. ಕೆಲವೊಮ್ಮೆ ಪ್ರಾಕೃತಿಕ ಅಸಮತೋಲನೆ, ಮತ್ತು ಬದಲಾವಣೆಗಳು ವ್ಯಕ್ತಿಯ ಮೇಲೆ ಪರಿಣಾಮಕಾರಿ ಪ್ರಭಾವ ಬೀರುತ್ತದೆ. ಆ ಪ್ರಾಕೃತಿಕ ಬದಲಾವಣೆಗೆ ತಕ್ಕಂತೆ ವ್ಯಕ್ತಿ, ವ್ಯಕ್ತಿತ್ವಗಳು ಬದಲಾಗುವುದು ಸಹಜವೇ. ಇವೆಲ್ಲವೂ ಜಗದ ನಿಯಮ ಕೂಡ.
ಈ ಪ್ರಕೃತಿಯಲ್ಲಿ ಮನುಷ್ಯ ಪ್ರಾಣಿಗೆ ಮಾತ್ರ ಅವರದೇ ಆದ ವಿಭಿನ್ನ ಭಾವನೆಗಳು, ಕಲ್ಪನೆಗಳು, ಆಶಯಗಳು, ಪ್ರೀತಿ-ನಿರೀಕ್ಷೆಗಳು, ಮತ್ತು ಅಭಿಪ್ರಾಯಗಳು ಮೂಡಿರುತ್ತವೆ. ಇವೆಲ್ಲವು ಕೆಲವರಲ್ಲಿ ತಮಗೆ ಅರಿವಿಲ್ಲದೆ ಮಿತಿಮೀರಿ ಹೋಗಿರಬಹುದು.
ಇದರ ಜೊತೆಗೆ ಎಲ್ಲೇ ಮೀರಿದ ಕೋಪ, ದ್ವೇಷ, ಅಸೂಯೆ, ಆಕ್ರೋಶ, ದುರಹಂಕಾರದ ವಿಲಕ್ಷಣ ಗುಣಗಳು ಜೊತೆಗೂಡಿದರೆ, ಸುಂದರ ಜೀವನ ನರಕದಂತೆ ಬದಲಾಗುತ್ತದೆ.
ಈ ತನ್ನ ವಿಲಕ್ಷಣ ಗುಣಗಳನ್ನು ಸುತ್ತ ಮುತ್ತಲಿನ ವ್ಯಕ್ತಿಗಳ ಮೇಲೆ ಹೇರಿ, ಪ್ರತಿಯಾಗಿ ಅವರಿಂದ ತನಗೆ ಹಿತಕರವಾದದ್ದನ್ನೇ ನಿರೀಕ್ಷೆ ಮಾಡಿದರೆ, ಆ ವ್ಯಕ್ತಿಯ ಭಾವನೆಗಳು, ಕಲ್ಪನೆಗಳು, ಆಶಯಗಳು ಏನಾಗಬೇಕು? ಒಮ್ಮೆ ದಾಳಿಯಾದರೆ ಪ್ರತಿರೋಧ, ಪ್ರತಿದಾಳಿ ಸಹಜ. ಆದರೆ ನಿರಂತರವಾಗಿ ವ್ಯಕ್ತಿಯ ಭಾವನೆಗಳಿಗೆ ಪೆಟ್ಟು ಬಿದ್ದರೆ ತನ್ನ ಸಹಜ ನಡೆ, ಮತ್ತು ಮಾತುಗಳು ಮೌನವಾಗಿ ಒಂದು ಹೊಸ ವ್ಯಕ್ತಿತ್ವವಾಗಿ ಬದಲಾಗುತ್ತದೆ.
- ರಾಘವೇಂದ್ರ. ಜಿ. ಶ್ರೀರಾಮಯ್ಯ
Comments
Post a Comment
ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ