ಬಡಿದೆಬ್ಬಿಸಿ ಕೇಳಬೇಕು ಗಾಂಧೀಜಿ ಯನ್ನ

ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರನ್ನ ವಿಜೃಂಭವಿಸುವ ನೆಪದಲ್ಲಿ ಶಾಂತಿ-ಅಹಿಂಸೆ ಎಂಬ ಧ್ಯೇಯದೊಂದಿಗೆ ಸ್ವಾತಂತ್ರ್ಯ ಸಂಗ್ರಾಮ ಮಾಡಿದ ಗಾಂಧೀಜಿಯವರ ಹೆಸರನ್ನು ಭವಿಷ್ಯದಲ್ಲಿ ಇತಿಹಾಸ ಕಲಿಕೆಯ ಪುಟಗಳಿಂದ ಅಳಿಸಿಹಾಕುವ ವ್ಯವಸ್ಥಿತ ಕುತಂತ್ರ ಏನಾದರೂ ನಡೆಯುತ್ತಿದೆಯಾ?

ಹೌದು, ರಾಜ್ಯದಲ್ಲಿ ನಡೆಯುತ್ತಿರುವ ಪ್ರಸ್ತುತ ಬೆಳವಣಿಗೆಗಳನ್ನು ಗಮನಿಸುತ್ತಿದ್ದರೆ ಹಾಗೆ ಅನ್ನಿಸೋದು ಸಹಜವೆ.

ಸ್ವಾತಂತ್ರ್ಯಪೂರ್ವ ದಲ್ಲಿ  ಮಹಾತ್ಮಗಾಂಧಿ ಯವರು ತೆಗೆದುಕೊಂಡ ಕೆಲವು ನಿರ್ಧಾರಗಳ ಬಗ್ಗೆ ಕೆಲ ಅವಿವೇಕಿಗಳು ಈಗಾಗಲೇ ಗುಸು-ಗುಸು ಅಪಪ್ರಚಾರ ಮಾಡುತ್ತಿದ್ದಾರೆ. ಮುಂಬರುವ ವರ್ಷಗಳಲ್ಲಿ ಗಾಂಧೀಜಿ ಯವರ ನಿಲುವು-ನಿರ್ಧಾರಗಳ ಬಗ್ಗೆ ಬಹಿರಂಗ ಚರ್ಚೆಗೆ ಸಿಲುಕಿಸಿದರೂ ಅಚ್ಚರಿ ಇಲ್ಲ. 

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಗಳಲ್ಲಿ ಹೆಚ್ಚು ಪ್ರಚಲಿತವಿದ್ದ ಹೆಸರುಗಳು ಸಾವರ್ಕರ್ ಮತ್ತು ಟಿಪ್ಪು ಸುಲ್ತಾನ್. ಒಬ್ಬರು ನಮ್ಮವ ವೀರ ಹೋರಾಟಗಾರ ಎಂದರೆ, ಮತ್ತೊಬ್ಬರು ನಮ್ಮವ ಧೀರ ಹೋರಾಟಗಾರ ಎಂದು ಬಡಿದಾಡುತ್ತಿದ್ದಾರೆ. ಇದರ ನಡುವೆ ಶತಮಾನಗಳಿಂದ ಅನುಕರಿಸಿ ಬಂದ ಗಾಂಧಿ-ತತ್ವಭೋಧನೆಗಳನ್ನ ಯಾರೊಬ್ಬರೂ ಸಮಾಜದ ಮುಂದೆ ಉದ್ಗರಿಸಿ ಪರಿಪಾಠ ಮಾಡದಿರುವುದು ವಿಪರ್ಯಾಸವೇ ಸರಿ.

ಈ ಎಲ್ಲಾ ಅಸಹಜ ಘಟನೆಗಳನ್ನ ಸೂಕ್ಷ್ಮವಾಗಿ ಗಮನಿಸಿ ನೋಡಿದರೆ ಕಣ್ಮುಂದೆ ಅಪ್ಪಳಿಸುವ ಸಹಜ ಅನುಮಾನ; ಇವೆಲ್ಲವೂ ವ್ಯವಸ್ಥಿತ ಷಡ್ಯಂತ್ರದ ಪ್ರಾಯೋಜಿತವೇ...?

ಪಿತಾಮಹಾ ಗಾಂಧೀಜಿ ಯವರು ಈಗ ಬದುಕಿದಿದ್ದರೆ ಅವರನ್ನ ಬಡಿದೆಬ್ಬಿಸಿ ಸತ್ಯಾ-ಸತ್ಯತೆಗಳನ್ನ ಕೇಳಬಹುದಿತ್ತು. ದುರದೃಷ್ಟಕರ, ನಮಗಿರುವುದು ಅವರವರ ಮೂಗಿನ ನೇರಕ್ಕೆ ಬರೆದಿರಬಹುದಾದ ಕೆಲವು ಇತಿಹಾಸ ಪುಸ್ತಕಗಳು ಮಾತ್ರ.

ಗತಿಸಿದ ಇತಿಹಾಸ ಪ್ರತ್ಯಕ್ಷ ಕಂಡವರಿಲ್ಲ. ಆದದ್ದು ಆಗಿಹೋಗಿದೆ, ಮತ್ತೆ ಮರಳಿಸಲಸಾಧ್ಯ. ತಮ್ಮ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಗತಿಸಿಹೋದ ಇತಿಹಾಸಕ್ಕೆ ವಿವಿಧ ಬಣ್ಣ ಬಳೆದು ಸಮಾಜದ ಸ್ವಾಸ್ತ್ಯ ಹದಗೆಡಿಸಬೇಡಿ ಎಂಬ ಕೋರಿಕೆ.
- ರಾಘವೇಂದ್ರ. ಜಿ. ಶ್ರೀರಾಮಯ್ಯ
 9060660060             

Comments

  1. Very True and Fact. Nice article. Unfortunately Many modern indian Youth disrespect Mahatma. Whatever, Gandhi's relevance is Eternal and Universal.

    ReplyDelete
  2. ಗಾಂಧಿ ಏನು ಅಂತ ನಮ್ಮ ದೇಶದಲ್ಲಿ ಅಲ್ಲ, ಪ್ರಪಂಚಕ್ಕೆ ಗೊತ್ತು, ಅವರ ಅಹಿಂಸೆ,ಸತ್ಯ ಮತ್ತು ನ್ಯಾಯವಾದ ಮಾರ್ಗ
    ಅಮೇರಿಕಾದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್,
    ಕುಳಿತು ಕೊಳ್ಳುವ ಹಿಂದಿನ ಗೋಡೆಗೆ ಅವರ ಕಛೇರಿಯಲ್ಲಿ ಗಾಂಧೀಜಿ ಪೋಟೋ ಇದೆ
    ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಅವರು ಹೇಳುತ್ತಾರೆ ನನ್ನ ಗೆ ಗಾಂಧೀಜಿ ಅವರೆ ಆದರ್ಶ ಎಂದು, ಅಲ್ಬರ್ಟ್ ಐನ್ ಸ್ಟೀನ್ ಹೇಳುತ್ತಾರೆ ರಕ್ತ ಮಾಂಸ ಇರುವ ಮನುಷ್ಯ ಹೀಗೂ ಇರುತ್ತಾರಾ ಎಂದು ಹೇಳುತ್ತಾರೆ, ಜೀಸಸ್ ನಾವು ನೋಡಿಲ್ಲ , ಗಾಂಧಿಯಲ್ಲಿ ನಾವು ಜೀಸಸ್ ನಾ ಕಾಣುತ್ತೇವೆ ಎಂದು ಹೇಳಿದರು. ಇದಕ್ಕಿಂತಲೂ ಹೆಚ್ಚಾಗಿ ಬೇಕೇ ರಾಘವೇಂದ್ರ ಅವರ ಬಗ್ಗೆ ತಿಳಿಯಲು
    ಗಾಂಧಿ ಕಥನ ಪುಸ್ತಕ ಓದಿ ತಿಳಿದುಕೊಳ್ಳಿ ಅಥವಾ ನನ್ನ ಸತ್ಯ ಅನ್ವೇಷಣೆ ಪುಸ್ತಕ ಓದಿ ಗಾಂಧಿ ಬಗ್ಗೆ ತಿಳಿಯಲು ತುಂಬಾ ಇದೆ
    ಗಾಂಧಿ ಹುಟ್ಟಿದ ದೇಶದಲ್ಲಿ ನಾವು ಹುಟ್ಟಿದೆ ಪುಣ್ಯ ರಾಘವೇಂದ್ರ
    ನಿನ್ನ ಬರಹಕ್ಕೆ ಧನ್ಯವಾದಗಳು

    ReplyDelete
  3. Very True. Nice article.

    ReplyDelete
  4. From Rajesh (via WhatsApp)

    ಕರೆಕ್ಟ್ ಸರ್... ಆದೊಂದೇ ಬಾಕಿರೋದು.. 😊

    ReplyDelete
  5. From Ashwini (via WhatsApp)

    Article chanagidhe

    ReplyDelete
  6. From Manu (WhatsApp)

    Very nice article.. 👍👍👍

    ReplyDelete
  7. Jayanth Sunagar (WhatsApp App)

    Excellent... Ninna Anisike sariyaagide. Nice Article 👌👏

    ReplyDelete

Post a Comment

ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಮನೋಜ್ಞ ಮಾದರಿ

ಅಪ್ಪಾ... Ex-MP ಎಂದರೇನು?

ಅಸಲಿ ರೈತ, ನಕಲಿ ಪ್ರೀತಿ.!

ರೈತರೆಲ್ಲ ಶ್ರೀಮಂತರಾಗುತ್ತಾರಂತೆ.!

ಸಾರ್ಥಕ ನಿವಾಸ

ಹೇಗಿದ್ದಾರೆ ಮೇಷ್ಟ್ರು..?