ಜ್ಞಾನಪೀಠ ಪ್ರಶಸ್ತಿ ವಿಜೇತರು

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ ಇದ್ದು, ಅತ್ಯಂತ ಪುರಾತನ ಭಾಷೆಗಳಲ್ಲಿ ಕನ್ನಡ ಭಾಷೆಯು ಸಹ ಒಂದು. 

ಕನ್ನಡಕ್ಕೆ ಒಟ್ಟು 8 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. 

ಸಂಖ್ಯೆ

ಲೇಖಕರ ಹೆಸರು

ಜ್ಞಾನಪೀಠ ಪ್ರಶಸ್ತಿ ಸಂದ ಲೇಖನ/ ಕೃತಿ

ಇತರೆ ಪ್ರಮುಖ
ಲೇಖನ/
ಕೃತಿಗಳು
1

ಶ್ರೀ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ

ಕಾವ್ಯನಾಮ: ಕುವೆಂಪು
ಸ್ಥಳ: ಕುಪ್ಪಳ್ಳಿ, ಶಿವಮೊಗ್ಗ
ಜನನ:  29-12-1904
ಮರಣ: 11-11-1994

ಶ್ರೀ ರಾಮಾಯಣ ದರ್ಶನಂ
(ಮಹಾಕಾವ್ಯ)

ವರ್ಷ: 1967

ಖಂಡಕಾವ್ಯ: ಚಿತ್ರಾಂಗದಾ
ಕವನ ಸಂಕಲನಗಳು: ಕೊಳಲು, ಪಾಂಚಜನ್ಯ , ನವಿಲು, ಕೃತ್ತಿಕೆ, ಅಗ್ನಿಹಂಸ, ಕಿಂಕಿಣಿ, ಇತ್ಯಾದಿ

ಕಾದಂಬರಿಗಳು: ಕಾನೂನು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು

ನಾಟಕಗಳು: ಯಮನ ಸೋಲು, ಜಲಗಾರ, ಮಹಾರಾತ್ರಿ, ಬಲಿದಾನ, ಚಂದ್ರಹಾಸ, ಇತ್ಯಾದಿ.

2

ಶ್ರೀ ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ದ.ರಾ. ಬೇಂದ್ರೆ)

ಕಾವ್ಯನಾಮ: ಅಂಬಿಕಾತನಯ ದತ್ತ
ಸ್ಥಳ: ಧಾರವಾಡ
ಜನನ:  13-01-1886
ಮರಣ: 26-10-1981

ನಾಕುತಂತಿ
(ಕೃತಿ)

ವರ್ಷ: 1973

ಕವನ ಸಂಕಲನ: ಅರಳುಮರಳು, ನಾದಲೀಲೆ, ಕೃಷ್ಣಕುಮಾರಿ, ಗರಿ, ಉತ್ತರಾಯಣ, ಸಖಿಗೀತ, ಉಯ್ಯಾಲೆ, ಬಾ ಹತ್ತರ, ಸೂರ್ಯಪಾನ, ಹೃದಯ ಸಮುದ್ರ, ಮುಕ್ತ ಕಂಠ, ಸಂಚಯ, ಇತ್ಯಾದೆ. 
3

ಶ್ರೀ ಶಿವರಾಮ ಕಾರಂತ

ಸ್ಥಳ: ಕುಂದಾಪುರ, ಉಡುಪಿ
ಜನನ:  10-10-1902
ಮರಣ: 09-12-1997

ಮೂಕಜ್ಜಿಯ ಕನಸುಗಳು
(ಕಾದಂಬರಿ)

ವರ್ಷ: 1977

ಕವನ ಸಂಕಲನಗಳು: ರಾಷ್ಟ್ರಗೀತ ಸುಧಾಕರ, ಸೀಳ್ಗವನಗಳು

ಕಾದಂಬರಿಗಳು: ಕುಡಿಯರ ಕೂಸು, ಚಿಗುರಿದ ಕನಸು, ಚೋಮನ ದುಡಿ, ಬೆಟ್ಟದ ಜೀವ, ಆಳಿದ ಮೇಲೆ, ಉಕ್ಕಿದ ನೊರೆ, ನಾವು ಕಟ್ಟಿದ ಸ್ವರ್ಗ, ಮರಳಿ ಮಣ್ಣಿದೆ, ಸರಸಮ್ಮನ ಸಮಾಧಿ, ಇತ್ಯಾದಿ

4

ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ

ಕಾವ್ಯನಾಮ: ಶ್ರೀನಿವಾಸ
ಸ್ಥಳ: ಮಾಸ್ತಿ, ಮಾಲೂರು, ಕೋಲಾರ
ಜನನ:  06-06-1891
ಮರಣ: 06-06-1986

ಚಿಕ್ಕವೀರ ರಾಜೇಂದ್ರ
(ಕಾದಂಬರಿ) 

ವರ್ಷ: 1983

ಕಾದಂಬರಿ: ಚನ್ನಬಸವ ನಾಯಕ

ಕಾವ್ಯ ಸಂಕಲನಗಳು: ಅರುಣಾ, ತಾವರೆ, ಸಂಕ್ರಾಂತಿ, ಮಲಾರ, ನವರಾತ್ರಿ, ಇತ್ಯಾದಿ.

ಖಂಡಕಾವ್ಯ: ಶ್ರೀರಾಮ ಪಟ್ಟಾಭಿಷೇಕ.

ನಾಟಕ: ತಾಳಿಕೋಟೆ, ಯಶೋಧರ, ಲಿಯರ್ ಮಹಾರಾಜ, ಕನಕಣ್ಣ, ಕಾಳಿದಾಸ, ಇತ್ಯಾದಿ.

5

ಶ್ರೀ ಡಾ.ವಿ.ಕೃ.ಗೋಕಾಕ್‌ (ವಿನಾಯಕ ಕೃಷ್ಣ ಗೋಕಾಕ್‌)

ಕಾವ್ಯನಾಮ: ವಿನಾಯಕ
ಸ್ಥಳ: ಹಾವೇರಿ
ಜನನ:  09-08-1909
ಮರಣ: 28-04-1992

ಭಾರತ ಸಿಂಧು ರಶ್ಮಿ
(ಮಹಾಕಾವ್ಯ)

ವರ್ಷ: 1990

ಕವನ ಸಂಕಲನಗಳು: ಕಲೋಪಾಸಕ, ಪಯಣ, ಸಮುದ್ರದಾಚೆಯಿಂದ, ಸಮುದ್ರ ಗೀತೆಗಳು, ನವ್ಯ ಕವಿಗಳು, ಉಗಮ, ಅಭ್ಯುದಯ, ಇತ್ಯಾದಿ. 

ಕಾದಂಬರಿಗಳು: ಸಮರಸವೇ ಜೀವನ, ಸಮುದ್ರಯಾನ, ಏರಿಳಿತ, ನಿರ್ವಹಣ ನರಹರಿ, ಇತ್ಯಾದಿ. 

 6

ಶ್ರೀ  ಡಾ. ಯು.ಆರ್. ಅನಂತಮೂರ್ತಿ

ಸ್ಥಳ: ತೀರ್ಥಹಳ್ಳಿ, ಶಿವಮೊಗ್ಗ
ಜನನ:  21-12-1932
ಮರಣ: 22-08-2014

ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ ಹಿನ್ನೆಲೆ

ವರ್ಷ: 1994

ಕಥಾ ಸಂಕಲನ: ಎಂದೆಂದೂ ಮುಗಿಯದ ಕತೆ, ಪ್ರಶ್ನೆ, ಮೌನಿ, ಆಕಾಶ ಮತ್ತು ಬೆಕ್ಕು, ಘಟಶ್ರಾದ್ಧ, ಸೂರ್ಯನ ಕುದುರೆ, ಇತ್ಯಾದಿ.

ಕಾದಂಬರಿ: ಸಂಸ್ಕಾರ, ಭಾರತೀಪುರ, ಭಾವ, ಅವಸ್ಥೆ, ಪ್ರೀತಿ ಮೃತ್ಯು ಭಯ, ದಿವ್ಯ.

7

ಶ್ರೀ ಗಿರೀಶ್ ರಘುನಾಥ ಕಾರ್ನಾಡ

ಸ್ಥಳ: ಮಾಥೆರ್ನ, ಮಹಾರಾಷ್ಟ್ರ
ಜನನ:  19-05-1938
ಮರಣ: 10-06-2019

ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ ಹಿನ್ನೆಲೆ

ವರ್ಷ: 1998

ಸಾಹಿತ್ಯ ನಾಟಕಗಳು: ಯಯಾತಿ, ಹಯವದನ, ನಾಗಮಂಡಲ, ಹಿಟ್ಟಿನಹುಂಜ ಮತ್ತು ಅಗ್ನಿ ಹಾಗೂ ಮಳೆ, ತುಘಲಕ್, ತಲೆದಂಡ ಹಾಗೂ ಟೀಪುಸುಲ್ತಾನ್, ಅಂಜುಮಲ್ಲಿಗೆ
8

ಶ್ರೀ ಚಂದ್ರಶೇಖರ ಕಂಬಾರ

ಸ್ಥಳ: ಗೊಡಗೇರಿ, ಬೆಳಗಾವಿ. 
ಜನನ: 02-01-1937

ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ ಹಿನ್ನೆಲೆ

ವರ್ಷ: 2010

ಕಾವ್ಯಗಳು: ಸಾವಿರಾರು ನೆರಳು, ಹಂಪಿಯ ಕಲ್ಲುಗಳು, ಬೆಳ್ಳಿ ಮೀನು, ಇತ್ಯಾದಿ. 

ನಾಟಕಗಳು: ಋಷಿಶೃಂಗ, ಜೋಕುಮಾರಸ್ವಾಮಿ, ಚಾಲೇಶ, ಜೈಸಿದ್ದ ನಾಯಕ, ಕಾಡುಕುದುರೆ, ನಾಯ್ ಕಥೆ. ಹರಕೆಯ ಕುರಿ, ಸಿರಿಸಂಪಿಗೆ, ಇತ್ಯಾದಿ. 
ಮಹಾಕಾವ್ಯ: ಚಕೋರಿ 
 
ಕಾದಂಬರಿ: ಕರಿಮಾಯಿ, ಜೆ.ಕೆ.ಮಾಸ್ತರ್ ಪ್ರಮೇಯ ಪ್ರಸಂಗ, ಸಿಂಗಾರವ್ವ ಮತ್ತು ಅರಮನೆ. ಇತ್ಯಾದಿ 

 

?

?  

 

Comments

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಹೇಗಿದ್ದಾರೆ ಮೇಷ್ಟ್ರು..?

ಬಡಿದೆಬ್ಬಿಸಿ ಕೇಳಬೇಕು ಗಾಂಧೀಜಿ ಯನ್ನ

ಸಾರ್ಥಕ ನಿವಾಸ

ಅಮುಲ್ ಗೆ ವಿರೋಧವೇಕೆ, ನಂದಿನಿ ಗೆ ಬೆಂಬಲ ಬೇಕೆ?

ಮನೋಜ್ಞ ಮಾದರಿ

ದೃಢ ನಿರ್ಧಾರ, ದೃಢ ಮನಸ್ಸು

ನಾ ಕೊಳ್ಳುವ ಮಾಂಸದಂಗಡಿ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ