ಅಮುಲ್ ಗೆ ವಿರೋಧವೇಕೆ, ನಂದಿನಿ ಗೆ ಬೆಂಬಲ ಬೇಕೆ?

ಮಾರುಕಟ್ಟೆಯಲ್ಲಿ ಆರೋಗ್ಯಕರ ಪೈಪೋಟಿ ವ್ಯವಹಾರ ಇರಬೇಕು ಸತ್ಯ. ಆದರೆ, ಕಾಲಾಂತರದಲ್ಲಿ ಪೈಪೋಟಿಯ ಸಮರದಿಂದ ಎದುರಾಳಿಯನ್ನು ಹೂತು ಹಾಕುವ ಹುನ್ನಾರ ಕಾಣದ ಕೈಗಳಿಂದ ನಡೆದರೆ ಏನಾಗಬಹುದು?

ಹೌದು, "KMF - ನಂದಿನಿ ಸಂಸ್ಥೆ" ವಿಷಯದಲ್ಲಿ ಪ್ರಸಕ್ತ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ ಹಾಗೆನ್ನಿಸುವುದು ಸತ್ಯವೇ. ದಶಕಗಳಿಂದ ಆಮೇಗತಿ ಯಲ್ಲಿ ಯಶಸ್ವಿಯಾಗಿ ಸಾಗಿಬಂದು ಕೋಟ್ಯಂತರ ರೈತರ ಪಾಲಿನ ಕಾಮಧೇನು ಕಲ್ಪವೃಕ್ಷದ ಮಡಿಲಿನಂತೆ ಇರುವುದು ಸತ್ಯವೇ. ಇಂತಹ ನಮ್ಮ ನಂದಿನಿ ಮಡಿಲಿಗೆ ಅಮುಲ್ ಎಂಬ ಸಂಸ್ಥೆ ದೀರ್ಘಕಾಲದಲ್ಲಿ ಕೊಡಲಿ ಪೆಟ್ಟು ಕೊಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಕಾರಣಗಳು...
  • ಅಮುಲ್ ಗುಜರಾತ್ ಸರ್ಕಾರದ ಕೃಪಾ ಪೋಷಿತ ಸಂಸ್ಥೆ. ಈ ಸಂಸ್ಥೆ ಕರ್ನಾಟಕ ರಾಜ್ಯದಲ್ಲಿ ಬೃಹತ್ತಾಗಿ ಬೇರೂರಲು ಅಲ್ಲಿನ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಿ ಪೋಷಿಸುತ್ತದೆ.
  • ಹಾಗಾಗಿ, ಅಮುಲ್ ನಮ್ಮ ರಾಜ್ಯದಲ್ಲಿ ಕಾರ್ಪೊರೇಟ್ ಮಟ್ಟದ ಮಳಿಗೆಗಳನ್ನು ಕಣ್ಣು ಕುಕ್ಕುವಂತೆ ಸ್ಥಾಪಿಸಿ, ಆರಂಭದಲ್ಲಿ ಕಡಿಮೆ ಬೆಲೆಗೆ ಆಕರ್ಷಣೆ ಮಾಡಿ, ಮನೆ-ಹಾಳು ಮಾಡುವಂತಹ Competitive Price, Market Competition ಎಂಬದನ್ನು ಅನಾವಶ್ಯಕವಾಗಿ ಹುಟ್ಟುಹಾಕುತ್ತಾರೆ.
  • ನಗರ ಪಟ್ಟಣದ ಗಲ್ಲಿ-ಗಲ್ಲಿಗಳಲ್ಲಿ ಪೆಟ್ಟಿ ಅಂಗಡಿ ಮಾದರಿಯಲ್ಲಿ ನಂದಿನಿ ಬೂತ್ ಗಳನ್ನು ನಡೆಸುತ್ತಿರುವ ನಮ್ಮ ಬಡ/ಮದ್ಯಮ ವರ್ಗದ ಜನರು ಆ ಮಟ್ಟದ ಸ್ಪರ್ಧೆ ಒಡ್ಡಲು ಸಾಧ್ಯವೇ?
  • ನಮ್ಮ KMF ಸಂಸ್ಥೆಯೇ ಆ ಮಟ್ಟಿನ ಹೂಡಿಕೆ ಮಾಡಲಾಗದು. ಅಥವಾ, ಕಡಿಮೆ ಬೆಲೆಯ ಮಾರಾಟದ ಪೈಪೋಟಿಯ ದುಂಬಾಲು ಬಿದ್ದರೆ KMF ಸಂಸ್ಥೆ ನಷ್ಟದಲ್ಲಿ ಬೀಳುತ್ತದೆ. ಪರಿಣಾಮ, ನೇರವಾಗಿ ನಮ್ಮ ರೈತರಿಗೆ ಬಾರಿ ಹೊಡೆತ.
  • ಪ್ರಸ್ತುತ, KMF ಗೆ ಬರುತ್ತಿರುವ ಹಣದಲ್ಲಿ ಸಮಾಧಾನಕರ ಪಾಲು ನಮ್ಮ ರೈತರಿಗೆ ನೀಡಿ, ತಕ್ಕ ಮಟ್ಟಿನ ಆದಾಯದಲ್ಲಿ ನಡೆಯುತ್ತಿರುವ ಸಂಸ್ಥೆಯನ್ನು ಕಾಲಂತರ ಕುತಂತ್ರದಿಂದ ನಷ್ಟದಲ್ಲಿ ದೂಡಬಹುದು. ಅಥವಾ, KMF ಗೆ ಸಂಬಂಧಪಟ್ಟ ಕೆಲವರನ್ನು ಅಮುಲ್ ಸಂಸ್ಥೆಯು ಶಾಮೀಲು ಮಾಡಿಕೊಂಡರೆ ಏನಾಗಬಹುದು?
  • ದಶಕಗಳಿಂದ ಯಾವುದೇ ಲೋಪ ದೋಷಗಳಿಲ್ಲದೆ ಅತ್ಯುನ್ನತ ಗುಣಮಟ್ಟ ಉತ್ಪಾದನೆ ಮಾಡುತ್ತಿರುವ ನಂದಿನಿಗೆ ಕಳಂಕ ತರಲು "ಕಳಪೆ ಕಳಪೆ" ಎಂಬ ಗುಮಾನಿ ಎಬ್ಬಿಸಿ ಕೆಟ್ಟ ಹೆಸರು ಬೀರಬಹುದು.
  • ನಂತರ, ಬೇಕಂತಲೇ ನಂದಿನಿ ಉತ್ಪನ್ನಗಳ ಗುಣಮಟ್ಟ ಕೆಡಿಸಿ, ಮಾರುಕಟ್ಟೆಗೆ ಸಮಯಕ್ಕೆ ಸರಿಯಾಗಿ ಉತ್ಪನ್ನಗಳು ಪೂರೈಕೆ ಆಗದಂತೆ ಮಾಡಿ, ತದನಂತರ ಒಂದೊಂದೇ ಪದಾರ್ಥಗಳು ಸಂಪೂರ್ಣ ಲಭ್ಯವಿಲ್ಲದಂತೆಯೂ ತಡೆಯಬಹುದು. ಈ ರೀತಿಯಾಗಿಬಿಟ್ಟರೆ ನಂದಿನಿ ಪದಾರ್ಥಗಳ ಮೇಲೆ ನಮಗೆ ಎಷ್ಟೇ ವ್ಯಾಮೋಹ ಇದ್ದರೂ ಖರೀದಿಸಲು ಮನಸ್ಸು ಬರುವುದಿಲ್ಲ ಅಥವಾ ಸರಿಯಾಗಿ ಸೇವೆ ಸಿಗುವುದಿಲ್ಲ.
  • ಈಗ ಸ್ವಲ್ಪ ಮಟ್ಟಿನ ಲಾಭದಲ್ಲಿ ನಡೆಯುತ್ತಿರುವ "ನಂದಿನಿ ಡೈರಿ", ಕಾಲಾಂತರದಲ್ಲಿ ನಷ್ಟ ಅನುಭವಿಸುವಂತೆ ಮಾಡಿ, ಸಂಪೂರ್ಣ ಮುಚ್ಚುವ ಹಂತಕ್ಕೆ ಹೋದರು ಅಚ್ಚರಿಯಿಲ್ಲ, ಅಥವಾ ಅಮುಲ್ ಸಂಸ್ಥೆಯ ಜೊತೆ ವಿಲೀನ ಮಾಡಿಸಬಹುದು.
  • ಅಂತರರಾಜ್ಯ ಮತ್ತು ಸ್ಪರ್ಧಾತ್ಮಕ ವ್ಯವಹಾರಗಳು ಬೇಕು ನಿಜ. ಈಗಾಗಲೇ ಅಮುಲ್ ಸೇರಿ 16 ಸಂಸ್ಥೆಗಳು ರಾಜ್ಯದಲ್ಲಿ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ. ಈ ತರಹ ಮತ್ತಷ್ಟು ಸಂಸ್ಥೆಗಳು ಸಹ ಬರಲಿ, ಆರೋಗ್ಯಕರವಾಗಿ ವ್ಯವಹರಿಸಲಿ, ಯಾರ ಅಭ್ಯಂತರವಿಲ್ಲ.
  • ಆದರೆ, ದೀರ್ಘಾವಧಿಯಲ್ಲಿ KMF ನ ಮುಚ್ಚಿಸುವ ಅಥವಾ ವಿಲೀನ ಮಾಡಿಕೊಳ್ಳುವ ಹುನ್ನಾರ ಬಲಿಷ್ಠ ಕಾಣದ ಕೈಗಳು ಮಾಡಬಹುದೇ?
  • ನಂದಿನಿ ಸಹ ಹೊರ ರಾಜ್ಯಗಳಲ್ಲಿ ಆರೋಗ್ಯಕರ ವ್ಯವಹಾರವನ್ನು ವಿಸ್ತರಿಸಿದೆ, ಆದರೆ, ಅಲ್ಲಿನ ಸ್ಥಳೀಯ ಸಂಸ್ಥೆಗಳನ್ನು ಮುಚ್ಚಿಸುವಂತ ಹುನ್ನಾರ ಯಾವತ್ತಿಗೂ ಮಾಡುವುದಿಲ್ಲ.
ದುರಂತ ಏನೆಂದರೆ, ಸಂಕುಚಿತ ಮನಸ್ತಿತಿಯುಳ್ಳ ಕೆಲವರು ಅಮುಲ್ ದೊಡ್ಡ ಮಟ್ಟದಲ್ಲಿ ಬರಲಿ ಬಿಡಿ ಎಂದು ಸಮರ್ಥಿಸುತ್ತಿದ್ದಾರೆ. ಆದರೆ, ದೀರ್ಘಾವಧಿಯಲ್ಲಿ ನಮ್ಮ KMF ನ ಅಸ್ಮಿತೆಯ ಬಗ್ಗೆ ಅಲ್ಪ ಆಲೋಚನೆಯೂ ಅವರಿಗಿಲ್ಲವಾಗಿದೆ.

ಉಳ್ಳವರಿಗೆ ಸುಖ-ವೈಭೋಗದ ಸೇವೆಗಳು, ಬೆರಳ ತುದಿಯಿಂದ ಮನೆ ಬಾಗಿಲಿಗೆ ತಂದುಕೊಡುವ ಸೇವೆ, ಇತ್ಯಾದಿ ಸೇವೆಗಳನ್ನು ಕಲ್ಪಿಸುವ ನೆಪದಲ್ಲಿ ಅಮುಲ್ ವ್ಯವಹಾರ  ದೈತ್ಯವಾಗಿ ಹರಡಿದರೆ, ನಂದಿನಿಯನ್ನು ಮುಚ್ಚಿ ಮುಂದಿನ ಪೀಳಿಗೆಯ ಹಾಲು ಉತ್ಪಾದಕ ರೈತರನ್ನು ಸಂಕಷ್ಟದಲ್ಲಿ ದೂಡುತ್ತಾರೆ ಏನೋ ಎಂಬ ಆತಂಕದ ಅನಿಸಿಕೆ.

ಅಮುಲ್ ರಾಜ್ಯದಲ್ಲಿ ಬೃಹತ್ತಾಗಿ ಬೇರೂರುವ ಮೊದಲೇ ಪ್ರತಿರೊದದಿಂದ ಕಿವುಚಿ ಹಾಕಿ, ನಮ್ಮ ರಾಜ್ಯದ ರೈತರನ್ನು ಮತ್ತು ಸ್ಥಳೀಯ ವ್ಯಾಪಾರಸ್ಥರನ್ನು ಬೆಂಬಲಿಸಬೇಕಿದೆ, ಎಂಬ ಅಭಿಪ್ರಾಯ.

ಇವೆಲ್ಲವೂ ನಕಾರಾತ್ಮಕ ಚಿಂತನೆ ಅನ್ನಿಸಬಹುದು ನಿಜ. ಬೇರೆ ಎಲ್ಲಾ ವಿಷಯಗಳಲ್ಲಿ ಸಕಾರಾತ್ಮಕ ಯೋಚನೆ ಮಾಡೋಣ. ಆದರೆ, ನಾಡಿನ ಅಸ್ಮಿತೆ ಕಾಪಾಡುವ ವಿಷಯದಲ್ಲಿ ನಕಾರಾತ್ಮಕವಾಗಿಯೂ ಚಿಂತಿಸಬೇಕಿದೆ. ತಾಜಾ ಉದಾಹರಣೆ, ನಮ್ಮ ರಾಜ್ಯದಲ್ಲಿ ಸದೃಢವಾಗಿದ್ದ "ವಿಜಯ ಬ್ಯಾಂಕ್" ವಿಲೀನಗೊಂಡಾಗ ಸಾಮಾನ್ಯ ಹೆಸರು "ಬ್ಯಾಂಕ್ ಆಫ್ ಭಾರತ" ಅಥವಾ ಬೇರೆ ಹೊಸ ಹೆಸರು ಯಾಕೆ ಆಗಲಿಲ್ಲ. "ಬರೋಡ" ಎಂದೇ ಯಾಕೆ? 

ಬಲಿಷ್ಟರ ಪ್ರಾಂತ್ಯದ ಹೆಸರುಗಳು, ವ್ಯವಹಾರಗಳು ದೇಶದಾದ್ಯಂತ ಬಲಂತದ ವಿಸ್ತರಣೆಯ ದುಂಬಾಲು ಯಾಕೆ?

ರಾಘವೇಂದ್ರ. ಜಿ. ಶ್ರೀರಾಮಯ್ಯ 
anisike-abhipraya.com                 9060660060

Comments

  1. ತುಂಬಾ ಒಳ್ಳೆಯ ಮಾಹಿತಿ. ಇದನ್ನ ನಮ್ಮ ರಾಜಕೀಯ ನಾಯಕರು ಅರಿತು ಕೊಳ್ಳಬೇಕು. Bro

    ReplyDelete
  2. Neevu helidu nurake nurarastu sathya

    ReplyDelete

Post a Comment

ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಮನೋಜ್ಞ ಮಾದರಿ

ಅಪ್ಪಾ... Ex-MP ಎಂದರೇನು?

ಅಸಲಿ ರೈತ, ನಕಲಿ ಪ್ರೀತಿ.!

ರೈತರೆಲ್ಲ ಶ್ರೀಮಂತರಾಗುತ್ತಾರಂತೆ.!

ಸಾರ್ಥಕ ನಿವಾಸ

ಹೇಗಿದ್ದಾರೆ ಮೇಷ್ಟ್ರು..?