ಪಳಗಿದ ಕುದುರೆಗಳ ನಿವೃತ್ತಿ...!

ನಿಮ್ಮ ಮನೆಯ ಹಿರಿಯರು ಅಥವಾ ಯಜಮಾನರು ವಯಸ್ಸಾದ ನಂತರ ತಾವು ರೂಢಿಸಿಕೊಂಡ ಮನೆಯ ಜವಾಬ್ದಾರಿತನವನ್ನು ಮಕ್ಕಳ ಹೆಗಲಿಗೆ ಹಾಕಿ ನಿವೃತ್ತಿ ಪಡೆದಿರುತ್ತಾರೆ, ಅಲ್ವಾ...?

ಹಾ... ಒಂದೊಂದು ಮನೆಯಲ್ಲಿ ಮಕ್ಕಳಿಗೆ ಸಾಮಾಜಿಕ ಪರಿಪಕ್ವತೆ ಇದ್ದರೂ ಸಹ ಜವಾಬ್ಧಾರಿ ಕೊಡದೆ ನಿಂಗೇನೂ ಗೊತ್ತಿಲ್ಲ ಎಂದು ಜರಿಯೋದು ಸಹ ನೋಡಿರುತ್ತೇವೆ - ಇದು ಅತೀ ವಿರಳ.

ವಾಡಿಕೆಯಂತೆ ಸಾಮಾನ್ಯವಾಗಿ ಎಲ್ಲಾ ಕ್ಷೇತ್ರಗಳಲ್ಲೂ ನಿವೃತ್ತಿ ಎಂಬ ಪದ್ಧತಿ ಇದೆ. 

ಈ ನೀತಿ ರಾಜಕಾರಣದಲ್ಲಿ ಏಕೆ ಆಗುತ್ತಿಲ್ಲ ಎಂಬುದಕ್ಕೆ ಹಲವಾರು ಕಾರಣಗಳಿವೆ.

1. ತಮ್ಮ ಕ್ಷೇತ್ರದಲ್ಲಿ ಸಾಧಿಸಿರುವ ಅಧಿಪತ್ಯ ಮಕ್ಕಳಿಗೆ ದಕ್ಕದಿರಬಹುದು. 

2. ವೈಯುಕ್ತಿಕ ಪ್ರತಿಷ್ಠೆ ಸಾಯೋವರೆಗೂ ಸಾಧಿಸಬೇಕೆಂಬ ತುಡಿತ. 

3. ಪಕ್ಷದಲ್ಲೇ ಬೇರೆಯವರಿಗೆ ಕೊಡಲು ಮನಸ್ಸು ಬರೋದಿಲ್ಲ - ಅಧಿಕಾರಧಾಹ.

ಪಕ್ಷ ನಿಷ್ಠೆ ಅಂತ ಎಲ್ಲಾ ನಾಯಕರು ಹೇಳುತ್ತಾರೆ ಅಲ್ವಾ… ಅವರು ಹೀಗೆ ಏಕೆ ಯೋಚಿಸಬಾರದು - “ಪಕ್ಷವು ನನಗೆ ಇಷ್ಟು ವರ್ಷಗಳ ಕಾಲ ಸಾಮಾಜಿಕ ಕೆಲಸ ಮಾಡಲು ಅವಕಾಶ ಮಾಡಿಕೊಡುವುದರ ಮೂಲಕ ದುಡ್ಡು ಮಾಡಿಕೊಳ್ಳಲು ಆಸ್ಪದ ಸಿಕ್ಕಿದೆ. ನನ್ನ ಹಾಗೆ ಬೇರೆಯವರೂ ದುಡ್ಡು ಮಾಡಿಕೊಳ್ಳಲಿ…” ಎಂದು 👀

ಸರಿಯಾಗಿ ಕಿವಿ ಕೇಳದೆ, ಕಣ್ಣು ಕಾಣದೆ, ಆ ಕಡೆ ಈ ಕಡೆ ಬೇರೆಯರವನ್ನ ಹಿಡಿದುಕೊಂಡು ಓಡಾಡುವಂತಹ ಸ್ಥಿತಿ ಇದ್ದರೂ ಯಾಕಪ್ಪ ಬೇಕು ಚುನಾವಣೆಗೆ ನಿಲ್ಲುವ ದರ್ದು? 

ಹಿರಿಯರ ಪರಿಶ್ರಮ, ಹೋರಾಟಗಳು, ಸಾಧನೆಗಳು ಎಲ್ಲವನ್ನು ಗೌರವಿಸೋಣ. ಅವರ ಅನುಭವಗಳನ್ನ ಕಿರಿಯರಿಗೆ ಮಾರ್ಗದರ್ಶನ ನೀಡುತ್ತಾ ಗೌರವಯುತ ನಿವೃತ್ತಿ ಪಡೆದರೆ ತುಂಬಾ ಒಳ್ಳೆಯದು ಅನ್ಸುತ್ತೆ. 

ಪಳಗಿದ ಕುದುರೆಗಳಂತೆ ಜೀವನ ಓಡಿಸುತ್ತಿರುವ ಈಗಿನ ರಾಜಕಾರಣಿಗಳು ತಾನಾಗಿಯೇ ಮುಗ್ಗರಿಸುವ ತನಕ ಆ ತರದ ಯೋಚನೆ ಬರೋಕೆ ಸಾಧ್ಯವೇ ಇಲ್ಲ. 

ಒಬ್ಬ ವ್ಯಕ್ತಿಗೆ ಕೇವಲ ಎರಡು ಬಾರಿ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ  ಕೊಡಬೇಕು. ಆದರೆ ಈ ತರಹದ ನಿಲುವುಗಳನ್ನ ಪಕ್ಷಗಳೇ ಮಾಡಬೇಕು ಅಥವಾ ಸಂವಿಧಾನ ತಿದ್ದುಪಡಿ ಮಾಡಬೇಕು.

ಇದರಿಂದ ವ್ಯಕ್ತಿಗತ ಬೆಂಬಲಿಗರು ಕೂಡ ಕಡಿಮೆ ಆಗ್ತಾರೆ - ಅದು ಸಮಾಜಕ್ಕೆ ತುಂಬಾ ಒಳ್ಳೆಯಯದು. ಇದರ ಹೆಚ್ಚಿನ ಮಾಹಿತಿಗಾಗಿ ಈ 👉ಲೇಖನ ಓದಿ.

ಆದರೆ ಈ ರೀತಿ ಮಾಡಿದರೆ ಇಪ್ಪತ್ತು ವರ್ಷಗಳಲ್ಲಿ ದುಡ್ಡು ಮಾಡ್ಡುವುದನ್ನ ಹತ್ತೇ ವರ್ಷಗಳಲ್ಲಿ ಮಾಡಲು ಪ್ರಯತ್ನಿಸಬಹುದು. ಈ ಸಮಸ್ಯಯನ್ನ ಬಗೆಹರಿಸಬಹುದು ಎಂಬುದು ನನ್ನ ಅಭಿಪ್ರಾಯ.

ನಿಮ್ಮ ಅನಿಸಿಕೆ? 

- ರಾಘವೇಂದ್ರ. ಜಿ. ಶ್ರೀರಾಮಯ್ಯ

9060660060               




Comments

  1. Good thoughts. But it won't happen in India.

    ReplyDelete
  2. Satyavada matu. Rajakaranigalu arta madikollade idre avare muggarisuttare. Bari duddu madodu bittare avaru enu madodilla. Waste.

    ReplyDelete
  3. Yeah, that's correct. We are seeing the changes now

    ReplyDelete
  4. ಅನ್ಯಾಯವಾಗಿ ಒಳ್ಳೆ ದುಡ್ಡು ಮಾಡಬೇಕಾದರೆ ಯಾರು ತಾನೇ ಮನೆಯಲ್ಲಿ ಮಲ್ಕೊಳ್ಳಿ ತಾರೆ!

    ReplyDelete

Post a Comment

ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಮನೋಜ್ಞ ಮಾದರಿ

ಅಪ್ಪಾ... Ex-MP ಎಂದರೇನು?

ಅಸಲಿ ರೈತ, ನಕಲಿ ಪ್ರೀತಿ.!

ಹೇಗಿದ್ದಾರೆ ಮೇಷ್ಟ್ರು..?

ಸಾರ್ಥಕ ನಿವಾಸ

ರೈತರೆಲ್ಲ ಶ್ರೀಮಂತರಾಗುತ್ತಾರಂತೆ.!