ಅಭಿಮಾನವೋ - ಬೆಂಬಲವೋ?


ಇತ್ತೀಚೆಗೆ ಯಾರ್ ನೋಡುದ್ರು ನಾನ್ ಅವನ ಅಭಿಮಾನಿ ಇವನ ಅಭಿಮಾನಿ ಅಂತ ಕೇಳಿ ಕೇಳಿ ಸಾಕಾಗೋಗಿದೆ.!


ಒಂದಿಷ್ಟು ರಾಜಕಾರಣಿಗಳ ಹಾಗೂ ಕಲಾವಿದರ ಅಭಿಮಾನಿಗಳು ಅಂತ ಹೇಳಿಕೊಂಡು ಸಣ್ಣ ಸಣ್ಣ ವಿಷಯಕ್ಕೂ ಇಲ್ಲಿ-ಹೆಗರಿ-ಅಲ್ಲಿ-ಬೀಳುತ್ತಾ💪ಬೀದಿಗಿಳಿದು ಧರಣಿ ಮಾಡುತ್ತಾ ಪ್ರಚಲಿತದಲ್ಲಿರುತ್ತಾರೆ.


ಹಾಗೆಯೇ, ಜೀವ ಉಳಿಸುವ ವೈದ್ಯರ, ಜೀವನ ರೂಪಿಸಿಕೊಡುವ ಗುರುಗಳ, ಗಡಿ ಕಾಯುವ ಯೋಧರ ಬಗ್ಗೆಯೂ ಪ್ರತಿಯೊಬ್ಬರಿಗೂ ಒಳ್ಳೆಯ ಅಭಿಮಾನ ಇರುತ್ತೆ ಕೂಡ.


"ಹೇಯ್ ನಿಂಗೊತ್ತಾ… ಅವರು ಒಳ್ಳೆ ಡಾಕ್ಟರ್, ಒಳ್ಳೆ ಟೀಚರ್, ಧೀರ ಯೋಧ" ಎಂಬ 👌ಪ್ರಶಂಸೆ👍 ಮಾತು ಹೇಳಿ, ಚಪ್ಪಾಳೆ ತಟ್ಟುವ ಪ್ರಸಂಗವಿದ್ದರೆ ಹೆಮ್ಮೆಯಿಂದ ಸ್ವಲ್ಪ ಜೋರಾಗಿಯೇ ತಟ್ಟುತ್ತೇವೆ👏👏👏.


☝ಇವರ ಸಮಾಜಮುಖಿ ಕಾರ್ಯಗಳಿಗೆ ಮಾತ್ರ ನಮ್ಮಗಳ ಅಭಿಮಾನವನ್ನು ಸೀಮಿತ ಮಾಡಿರುತ್ತೇವೆ. ಅಂದರೆ ಅವರ ವೈಯುಕ್ತಿಕ ಜೀವನದಲ್ಲಿ ಏನೇ ಆದರೂ ಈ ಅಭಿಮಾನದ ನಂಟು ವಿಸ್ತರಿಸುವುದಿಲ್ಲ.


ನಾವುಗಳು ಆಡಿ-ಬೆಳೆದ ಊರು, ಓದಿದ ಶಾಲೆ ಇತ್ಯಾದಿಗಳ ಮೇಲೂ ಒಂದು ರೀತಿಯ ಅಭಿಮಾನ ಇದ್ದೇ ಇರುತ್ತೆ. ಇವುಗಳನ್ನು ನೆನಪಿಸಿಕೊಂಡರೆ ಸಾಕು ಏನೋ ಒಂದು ರೀತಿಯ ಖುಷಿ, ಹೆಮ್ಮೆ.

ನಾವು ಹೆಚ್ಚು ಅಭಿಮಾನ ಇಟ್ಟಿರುವ ಈ ವರ್ಗಕ್ಕೆ, ಅಥವಾ ಸ್ಥಳಕ್ಕೆ ಏನೇ ತೊಂದರೆ ಆದರು ಅಭಿಮಾನವುಳ್ಳ ಯಾರೊಬ್ಬರೂ ಬೀದಿಗಿಳಿದು ಪ್ರತಿಭಟನೆ ಮಾಡುವುದಿಲ್ಲ. 

ಅದೇ ಒಬ್ಬ ಆರ್ಥಿಕವಾಗಿ ಪ್ರಬಲವುಳ್ಳ ವೈದ್ಯರು ಅಥವಾ ಗುರುಗಳು ರಾಜಕೀಯಕ್ಕೆ ಇಳಿದ ತಕ್ಷಣ ಅವರಿಗೆ ಅಭಿಮಾನಿ ಎಂದು ಬಿಂಬಿಸಿಕೊಳ್ಳುವ ಬೇರೊಂದು ವರ್ಗ ಹುಟ್ಟಿಕೊಳ್ಳುತ್ತೆ. ಇದು ಅಭಿಮಾನವೋ ಅಥವಾ ಬೆಂಬಲವೋ?

ಅಭಿಮಾನವುಳ್ಳ ಬೆಂಬಲಿಗ ವರ್ಗ ಪ್ರತಿಭಟನೆ ಮಾಡುವುದು ಸರಿ-ತಪ್ಪು ಎಂಬುದರ ಬಗ್ಗೆ ವಿಮರ್ಶೆ ಮಾಡುತ್ತಿಲ್ಲ.

ಇಲ್ಲಿ ತರ್ಕಕ್ಕೆ ಸಿಗದ ಪ್ರಶ್ನೆಗಳು; 
1. ಸಮಾಜದ ಏಳಿಗೆಗೆ ಕೆಲಸ ಮಾಡುತ್ತಿರುವವರಿಗೆ "ಅಭಿಮಾನದ-ಬೆಂಬಲ" ಏಕೆ ಸಿಗುತ್ತಿಲ್ಲ?

2. ಪ್ರತಿಭಟನೆ ಮಾಡುವವರು ಅಭಿಮಾನಿಗಳಾ ಅಥವಾ ಬೆಂಬಲಿಗರಾ?

3. ನಿಜವಾದ ಅಭಿಮಾನ/ಅಭಿಮಾನಿ ಯಾವುದು ಮತ್ತು ಯಾರು?

- ರಾಘವೇಂದ್ರ. ಜಿ. ಎಸ್ / 9060660060 Comments

Post a Comment

ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ