ಸರ್ಕಾರಿ ಶಾಲೆಗೆ ಕೊಡುಗೆ

ಆತ್ಮೀಯರ ಸಹಾಯ ಮತ್ತು ಸಹಕಾರದಿಂದ Desktop Computer System, UPS, Printer, Computer Table, Pin-up Notice Board ಮತ್ತು 20 ಶಬ್ದಕೋಶ (Dictionaries) ಪುಸ್ತಕಗಳನ್ನು ಖರೀದಿಸಿ ಇವುಗಳನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಗಂಟಿಗಾನಹಳ್ಳಿ, ತೂಬಗೆರೆ ಹೋಬಳಿ, ದೊಡ್ಡಬಳ್ಳಾಪುರ ತಾ., ಬೆಂ.ಗ್ರಾ.ಜಿಲ್ಲೆ ಶಾಲೆಗೆ ಕೊಡುಗೆಯಾಗಿ ನೀಡಿದ್ದೇವೆ.

ಸಂಗ್ರಹವಾದ ಒಟ್ಟು ಹಣ Rs. 38,200. ಖರೀದಿಯ ವಿವರಗಳು ಕೆಳಕಡಂತಿವೆ.

ಕಂಪ್ಯೂಟರ್ ಮತ್ತು ಇತರೆ :      Rs. 30,900
ಕಂಪ್ಯೂಟರ್ ಟೇಬಲ್ :           Rs. 2,600
20 ನಿಘಂಟು/Dictionaries: Rs. 2,540
ನೋಟಿಸ್/Pin-up ಬೋರ್ಡ್: Rs. 2,700

ಶಿಕ್ಷಕರ ಮನವಿ ಮೇರೆಗೆ ನೊಟೀಸ್ (Pin-up) ಬೋರ್ಡನ್ನು ಅಂಗನವಾಡಿಗೆ ನೀಡಲಾಗಿದೆ (ಪುಟ್ಟ ಮಕ್ಕಳು ಬಿಡಿಸಿದ ಚಿತ್ರಗಳನ್ನು ಅಂಟಿಸುವ ಸಲುವಾಗಿ).

ಮಕ್ಕಳು ಮನೆಯಲ್ಲಿ ಸ್ವತಃ ಅಭ್ಯಾಸ ಮಾಡುವಾಗ ಜೊತೆಯಲ್ಲಿ ತಮ್ಮದೇ ಒಂದು ಡಿಕ್ಷನರಿ ಇದ್ದರೆ ಹೆಚ್ಚು ಉಪಲಬ್ಧ. ಓದುವಾಗ ಪದಗಳ ಅರ್ಥ ನೋಡುವ ಸಲುವಾಗಿ ಮೊಬೈಲ್ ಪಕ್ಕದಲ್ಲಿ ಇಟ್ಟುಕೊಳ್ಳುವ ಹವ್ಯಾಸ ತಪ್ಪಬಹುದು. ಈ ಪುಸ್ತಕವನ್ನು ಮಕ್ಕಳು ಕನಿಷ್ಠ 5-9 ವರ್ಷಗಳು ಬಳಸುವ ಸಾದ್ಯತೆ ಇದೆ. ಹೀಗಾಗಿ, ಸುತ್ತಮುತ್ತಲಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ 6 ರಿಂದ 10 ನೇ ತರಗತಿಯ ಪ್ರತೀ ಮಕ್ಕಳಿಗೊಂದು ಡಿಕ್ಷನರಿ ಉಚಿತವಾಗಿ ನೀಡಬೇಕೆಂಬ ಅಭಿಲಾಷೆ ಇದೆ. 

ಸ್ವಇಚ್ಛೆಯಿಂದ ಯಾರಾದರೂ DK Bharadvaj's Standard Abridged Dictionary (English->English->Kannada) ಪುಸ್ತಕ ಕೊಡಿಸುವ ಆಸಕ್ತಿ ಇದ್ದರೆ ತಿಳಿಸಿ. ಪುಸ್ತಕಗಳ ಕೊಡುಗೆಗೆ ಹಣ ಸ್ವೀಕರಿಸುವುದಿಲ್ಲ. ತಾವು ನೇರವಾಗಿ ಬುಕ್ ಸ್ಟೋರ್ ಗೆ ಹಣ ವರ್ಗಾಯಿಸಿದರೆ ನಾವು ಅಲ್ಲಿಂದ ಪುಸ್ತಕಗಳನ್ನು ಪಡೆದು ಸರ್ಕಾರಿ ಶಾಲೆಯ ಮಕ್ಕಳಿಗೆ ನೀಡುವ ವ್ಯವಸ್ಥೆ ಮಾಡಲಾಗುತ್ತದೆ. ನಿಮಗಿಷ್ಟವಾದರೆ ಬೇರೆಯವರಿಗೆ ಕೈ ಜೋಡಿಸಲು ಮನವಿ ಮಾಡಿ, ಶೇರ್ ಮಾಡಿ.

ಈಗಾಗಲೇ ಸಹಾಯ ಹಸ್ತ ನೀಡಿರುವ ತುಂಬು ಹೃದಯಿಗಳಿಗೆ ಶಾಲೆಯ ಶಿಕ್ಷಕ ವೃಂದ ಮತ್ತು ಮಕ್ಕಳ ಪರವಾಗಿ, ಹಾಗೂ ಸಾಕ್ಷಿಯಾಗಿದ್ದ ಗ್ರಾಮಸ್ಥರ ಪರವಾಗಿ ತಮಗೆಲ್ಲರಿಗೂ ಧನ್ಯತೆಯ ಧನ್ಯವಾದಗಳು.🙏

ಇಂತಿ
ರಾಘವೇಂದ್ರ. ಜಿ.ಎಸ್ 
9060660060

Comments

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಅಪ್ಪಾ... Ex-MP ಎಂದರೇನು?

ಮನೋಜ್ಞ ಮಾದರಿ

ಅಸಲಿ ರೈತ, ನಕಲಿ ಪ್ರೀತಿ.!

ರೈತರೆಲ್ಲ ಶ್ರೀಮಂತರಾಗುತ್ತಾರಂತೆ.!

ಸಾರ್ಥಕ ನಿವಾಸ

ಹೇಗಿದ್ದಾರೆ ಮೇಷ್ಟ್ರು..?