ನಮ್ಮ ಮೆಟ್ರೋ, ನಮ್ಮ ಶೌಚಾಲಯ

ಹೆಮ್ಮೆಯ "ನಮ್ಮ ಬೆಂಗಳೂರು" ನಲ್ಲಿ ಅಪರೂಪಕ್ಕೆ "ನಮ್ಮ ಮೆಟ್ರೋ" ದಲ್ಲಿ ಪ್ರಯಾಣ ಮಾಡಿದೆ. ಅದ್ಭುತ ವಿನ್ಯಾಸ, ಅಗತ್ಯ ಸೌಲಭ್ಯಗಳಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆ. ಆದರೆ, ಮೆಟ್ರೋ ನಿಲ್ದಾಣಗಳಲ್ಲಿ ಶೌಚಾಲಯ ವ್ಯವಸ್ಥೆ ಸಾಮಾನ್ಯವಾಗಿ ಮೊದಲನೇ, ಎರಡನೇ ಮಹಡಿಗಳಲ್ಲಿ ಇದ್ದು, ಕೇವಲ ಮೆಟ್ರೋ ಪ್ರಯಾಣಿಕರ ಬಳಕೆಗೆ ಮಾತ್ರ ಸೀಮಿತವಾಗಿವೆ.

ಪ್ರತೀ ಮೆಟ್ರೋ ನಿಲ್ದಾಣಗಳ ನೆಲ-ಮಹಡಿಯಲ್ಲಿ "ನಮ್ಮ ಶೌಚಾಲಯ" ವ್ಯವಸ್ಥೆ ಇದ್ದರೆ ಹೇಗೆ? ಎಂಬ ಪರಿಕಲ್ಪನೆ.! ಈ ವ್ಯವಸ್ಥೆಯನ್ನು ರಸ್ತೆಯಲ್ಲಿ ಓಡಾಡುವ ಪ್ರತಿಯೊಬ್ಬ ಸಾರ್ವಜನಿಕರು ಬಳಸಲು ಅವಕಾಶ ಕಲ್ಪಿಸಬೇಕು. ಏಕೆಂದರೆ ರಸ್ತೆ ಬದಿಗಳಲ್ಲಿ ಈಗಿರುವ BBMP ಸ್ವಾಮ್ಯದ ಶೌಚಾಲಯಗಳು ಹೇಳಿಕೊಳ್ಳುವಷ್ಟು ಪರಿಣಾಮಕಾರಿ ಬಳಕೆಯಿಲ್ಲ, ಮುಖ್ಯವಾಗಿ ಮಹಿಳೆಯರ ಬಳಕೆಗೆ ಅಯೋಗ್ಯ.

ನಮ್ಮ ರಾಜ್ಯ ಸರ್ಕಾರ ಮತ್ತು ಮೆಟ್ರೋ ಸಂಸ್ಥೆ "ನಮ್ಮ ಶೌಚಾಲಯ" ವ್ಯವಸ್ಥೆಗೆ ಖರ್ಚು ಮಾಡುವುದು ಬೇಡ. ಬದಲಾಗಿ, ನೆಲ-ಮಹಡಿಯ ಒಂದಿಷ್ಟು ಜಾಗವನ್ನ ಯಾವುದಾದರು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಿದರೆ ಸಾಕು. ನಿರ್ಮಾಣ ಮತ್ತು ಕಠಿಣ ನಿಯಮಗಳ ಮುಖೇನ ಸ್ವಚ್ಛತೆಯ ನಿರ್ವಹಣೆ ಅವರದ್ದೇ ಇರಬೇಕು.

ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಸ್ವಚ್ಛ ಶೌಚಾಲಯದ ವ್ಯವಸ್ಥೆ ಹೆಜ್ಜೆ-ಹೆಜ್ಜೆಗೂ ಸಿಕ್ಕರೆ ವೃದ್ಧರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಬಹಳ ಅನುಕೂಲ ಆಗುವುದರ ಜೊತೆಗೆ ನೈರ್ಮಲ್ಯ ಕಾಪಾಡಬಹುದು ಎಂಬ ಅನಿಸಿಕೆ.

ನಮ್ಮ ಬೆಂಗಳೂರು - ನಮ್ಮ ಮೆಟ್ರೋ - ನಮ್ಮ ಶೌಚಾಲಯ 
- ರಾಘವೇಂದ್ರ. ಜಿ. ಶ್ರೀರಾಮಯ್ಯ
 9060660060           

Comments

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಮನೋಜ್ಞ ಮಾದರಿ

ಅಪ್ಪಾ... Ex-MP ಎಂದರೇನು?

ಅಸಲಿ ರೈತ, ನಕಲಿ ಪ್ರೀತಿ.!

ಹೇಗಿದ್ದಾರೆ ಮೇಷ್ಟ್ರು..?

ಸಾರ್ಥಕ ನಿವಾಸ

ರೈತರೆಲ್ಲ ಶ್ರೀಮಂತರಾಗುತ್ತಾರಂತೆ.!