ಬುಲ್ಲೆಟ್ ಬಿರಿಯಾನಿ

ನೀಚ ಮನಸ್ಥತಿಯ ಮತಾಂಧರು ಮಾಡುವ/ಮಾಡಿಸುವ ಬರ್ಭರ ಕೊಲೆಗಳು ಸಮಾಜದಲ್ಲಿ ದಿಗಿಲು ಮೂಡಿಸುತ್ತವೆ. ಈ ನರಹಂತಕ ಮತಾಂಧರಿಗೆ ಕೊಲೆ ಮಾಡುವ ಮುನ್ನವೇ ಕಾನೂನಿನ ಭಯವಿಲ್ಲ ಎಂದ ಮೇಲೆ, ಕೊಲೆ ಮಾಡಿದ ನಂತರ ಮತ್ತಷ್ಟು ಧೈರ್ಯ ಬರುವುದು ಸಹಜವೆ. ಯಾಕೆಂದರೆ ನಮ್ಮ ವ್ಯವಸ್ಥೆಯು ಹಾಗೆ ಇದೆ ಬಿಡಿ.

ಹಾಗಾಗಿ, ಈ ನರ ರಾಕ್ಷಸರನ್ನು ಬಂದಿಸಿ, ವರ್ಷಗಳ ಕಾಲ ಜೈಲಿನಲ್ಲಿ ಚಿಕನ್/ಮಟನ್/ಬೀಫ್ ಬಿರಿಯಾನಿ ಕೊಟ್ಟು ಸಾಕುವ ಬದಲು ಪೊಲೀಸರು ಎನ್ಕೌಂಟರ್ ಮಾಡಿ ಬುಲ್ಲೆಟ್ ಬಿರಿಯಾನಿ ಉಣಬಡಿಸಿದರೆ ಮಿಕ್ಕ ಕ್ರಿಮಿಗಳಿಗೆ ಪಾಠವಾಗುತ್ತದೆ. ಎಲ್ಲಾ ಪ್ರಕರಣಗಳಲ್ಲಿ ಈ ರೀತಿ ಮಾಡಲು ಸಾದ್ಯವಿಲ್ಲ, ನಿಜ. ಹತ್ತರಲ್ಲಿ ಒಂದೆರೆಡಾದರು ಮಾಡಬಹುದಲ್ಲವೇ?

ಕಾನೂನಿನಲ್ಲಿ ಇದಕ್ಕೆ ಅವಕಾಶ ಇಲ್ಲವಾದರೂ ಎನ್ಕೌಂಟರ್ ಮಾಡುವ ಪ್ರಸಂಗ ಪೊಲೀಸರು ಸೃಷ್ಟಿಸಬಹುದು. ಇದಕ್ಕೆ ಬೇಕಿರುವುದು ಸರ್ಕಾರದ ಕಡೆಯಿಂದ ಪೊಲೀಸ್ ಮುಖ್ಯ ಅಧಿಕಾರಿಗೆ ಮೌಖಿಕ ಆದೇಶವಷ್ಟೇ. ನಂತರದಲ್ಲಿ ಅಧಿಕಾರಿಗಳ ಮೇಲಿನ ಕಾನೂನಿನ ಗುರಾಣಿಯನ್ನ ಹೇಗೋ ಸಂಬಾಳಿಸಬಹುದು ಎಂಬನಿಸಿಕೆ.

ಇಲ್ಲವಾದರೆ, ಸರ್ಕಾರ ದಿಟ್ಟ ನಿರ್ಧಾರ ಮಾಡಿ ಕಾನೂನಿನ ಮೂಲಕವೇ ಒಂದು ವರ್ಷದೊಳಗೆ ಅಪರಾಧಿಗಳನ್ನ ಗಲ್ಲಿಗೇರಿಸುವ ಕಾನೂನು ತಿದ್ದುಪಡಿ ಹೊರಡಿಸಿದರೆ ದುರುಳರಿಗೆ ದಿಟ್ಟ ಸಂದೇಶವಾಗಬಹುದು.

- ರಾಘವೇಂದ್ರ. ಜಿ. ಶ್ರೀರಾಮಯ್ಯ

Comments

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಮನೋಜ್ಞ ಮಾದರಿ

ಅಪ್ಪಾ... Ex-MP ಎಂದರೇನು?

ಅಸಲಿ ರೈತ, ನಕಲಿ ಪ್ರೀತಿ.!

ರೈತರೆಲ್ಲ ಶ್ರೀಮಂತರಾಗುತ್ತಾರಂತೆ.!

ಸಾರ್ಥಕ ನಿವಾಸ

ಹೇಗಿದ್ದಾರೆ ಮೇಷ್ಟ್ರು..?