ಧರ್ಮ ಪಾಲನೆಯಲ್ಲಿ ಬದಲಾವಣೆ

ಪ್ರಾಚೀನ ಕಾಲಘಟ್ಟಕ್ಕೆ ಅನುಗುಣವಾಗಿ ರಚನೆಯಾದ ಪವಿತ್ರ ಧರ್ಮ ಗ್ರಂಥಗಳು ಭೌಗೋಳಿಕ ಹಾಗೂ ವೈಜ್ಞಾನಿಕವಾಗಿ ಇದ್ದಿದ್ದು ಸತ್ಯ. ವೈಜ್ಞಾನಿಕವಾಗಿ ಅತಿ ವೇಗದಲ್ಲಿ ನಡೆಯುತ್ತಿರುವ ಈಗಿನ ಪ್ರಪಂಚದಲ್ಲಿ ಪ್ರಾಚೀನ ಕಾಲದ ಗ್ರಂಥಗಳಲ್ಲಿನ ಪಾಲನೆಯಲ್ಲಿ ಅನಿವಾರ್ಯತೆ ಮತ್ತು ಅವಶ್ಯಕತೆ ಅನುಗುಣವಾಗಿ ಸ್ವಯಂ ತಿದ್ದುಪಡಿ ಮಾಡಿಕೊಂಡರೆ ತಪ್ಪೇನು?

ಹೊಸ ಅನ್ವೇಷಣೆಗಳು ಅಥವಾ ವಿಷಯಗಳನ್ನು ಆಧರಿಸಿ 5 ವರ್ಷಗಳಿಗೆ ಒಮ್ಮೆ ಪಠ್ಯ ಪುಸ್ತಕ ಬದಲಿಸಿ ಮಕ್ಕಳಿಗೆ ಹೊಸ ಕಲಿಕೆ ಕೊಡುತ್ತೇವೆ. ಸಂವಿಧಾನ ರಚನೆ ಮಾಡುವಾಗ ಇದ್ದ ಕಾನೂನುಗಳನ್ನು ಈಗಿನ ಕಾಲಕ್ಕೆ ಅನುಗುಣವಾಗಿ ತಿದ್ದುಪಡಿ ಮಾಡಿದ್ದೇವೆ.

ಪ್ರತಿಯೊಂದು ಧರ್ಮ ಶಾಸ್ತ್ರ-ಸಂಪ್ರದಾಯಗಳು ಪ್ರಾಚೀನ ಕಾಲದಲ್ಲಿ ವೈಜ್ಞಾನಿಕವಾಗಿ ಕೂಡಿದ್ದವು. ಅವುಗಳನ್ನು ಮುಂದಿನ ಪೀಳಿಗೆಗೆ ಪಾಲನೆ ಮಾಡಿಸಲೇ ಬೇಕು ಎಂಬ ನಿಟ್ಟಿನಲ್ಲಿ ಕೆಲವು ಶಾಸ್ತ್ರ-ಸಂಪ್ರದಾಯಗಳು ಮೂಢನಂಬಿಕೆ ಆಗಿಬಿಟ್ಟಿವೆ. ಈಗಿನ ವ್ಯವಸ್ಥೆಗೆ ತಕ್ಕಂತೆ ಮತ್ತು ಸರ್ಕಾರಿ-ಸಾರ್ವಜನಿಕ ನಿಯಮಗಳ ಪ್ರಕಾರ ಕೆಲವು ಶಾಸ್ತ್ರ-ಸಂಪ್ರದಾಯಗಳನ್ನು ಪಾಲನೆ ಮಾಡಲು ಸಾಧ್ಯವಾಗುವುದಿಲ್ಲ. ಹೀಗಂದ ಮಾತ್ರಕ್ಕೆ ಇದು ಧರ್ಮ ವಿರೋಧ ಆಗುವುದಿಲ್ಲ.

- ರಾಘವೇಂದ್ರ. ಜಿ. ಶ್ರೀರಾಮಯ್ಯ
 9060660060         

Comments

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಮನೋಜ್ಞ ಮಾದರಿ

ಅಪ್ಪಾ... Ex-MP ಎಂದರೇನು?

ಅಸಲಿ ರೈತ, ನಕಲಿ ಪ್ರೀತಿ.!

ರೈತರೆಲ್ಲ ಶ್ರೀಮಂತರಾಗುತ್ತಾರಂತೆ.!

ಸಾರ್ಥಕ ನಿವಾಸ

ಹೇಗಿದ್ದಾರೆ ಮೇಷ್ಟ್ರು..?