ಆತಂಕದ ಸಾವು - ನೈಜ ಘಟನೆ

ತಾಯಿಗೆ ಆಸರೆಯಾಗಿದ್ದ 28 ವರ್ಷ ವಯಸ್ಸಿನ ಯುವಕ, ಗಟ್ಟಿಮುಟ್ಟಾದ ದೇಹ, ಮುಗ್ಧ ಮನಸ್ಸಿನ ಮಗ ಆತಂಕ ಮತ್ತು ಭಯದಿಂದ ಪ್ರಾಣ ಕಳೆದುಕೊಂಡಿದ್ದಾನೆ. ಜೀವನಕ್ಕೆ ನೆರಳಾಗಿ ಇದ್ದೊಬ್ಬ ಮಗನನ್ನು ಕಳೆದುಕೊಂಡ ಆ ತಾಯಿಯ ಗೋಳು, ಆಕ್ರಂದನ ಭಗವಂತನಿಗೆ ಪ್ರೀತಿ.

ಸಾಯುವ ಕೆಲ ಹೊತ್ತಿನ ಮುಂಚೆ ಭಯದಿಂದ ಬೆವರುತ್ತ ಕ್ಷಣಾರ್ಧದಲ್ಲಿ ತನ್ನ ಬಟ್ಟೆಯೆಲ್ಲ ಒದ್ದೆಯಾಗಿತ್ತು. ಜೊತೆಯಲ್ಲಿದ್ದ ಸ್ನೇಹಿತ "ಹೇಯ್... ನಾನ್ ಇದೀನಿ ಭಯ ಪಡಬೇಡ, ಧೈರ್ಯವಾಗಿರು, ಏನೂ ಆಗೋದಿಲ್ಲ..." ಎಂದು ಅವನ ಕೈ ಗಟ್ಟಿಯಾಗಿ ಹಿಡಿದು ಧೈರ್ಯ ತುಂಬುತ್ತಿದ್ದ.
"ಹಾ... ಧೈರ್ಯವಾಗಿ ಇದೀನಿ..." ಅಂತ ಅವನು ನಿಧಾನವಾಗಿ ಹೇಳುತ್ತಲೇ ಮತ್ತೆ ಬೆವರುತ್ತಿದ್ದ. ನೋಡ ನೋಡುತ್ತಾ ಬಟ್ಟೆ ಜೊತೆಗೆ ತಾನು ಮಲಗಿದ್ದ ಹಾಸಿಗೆ ಸಹ ತನ್ನ ದೇಹದ ಬೆವರಿನಿಂದ ಒದ್ದೆಯಾಗಿತ್ತು. ಕೆಲವೇ ನಿಮಿಷಗಳಲ್ಲಿ ಸ್ನೇಹಿತನ ಕಣ್ಣ ಮುಂದೆಯೇ ಜೀವ ಬಿಟ್ಟ.

ಹಳ್ಳಿಯಲ್ಲಿ ಯಾವುದೇ ದುಶ್ಚಟಗಳಿಗಲ್ಲಿದೆ ತನ್ನ ಪಾಡಿಗೆ ತಾಯಿಯೊಡನೆ ಜೀವನ ಸಾಗಿಸುತ್ತಿದ್ದ ಈತನಿಗೆ ಯಾವುದೇ ಕಾಯಿಲೆ ಇರಲಿಲ್ಲ. ಆದರೆ ಮಾಧ್ಯಮಗಳು ಸೃಷ್ಟಿ ಮಾಡಿದ ಕಾಲ್ಪನಿಕ ಭೂತಕ್ಕೆ ಹೆದರಿ ಇಹಲೋಕ ತ್ಯಜಿಸಿಬಿಟ್ಟಿದ್ದಾನೆ.

ಹೌದು, ಕರೊನ 2ನೇ ಅಲೆ ಎಂಬ ಕಾಲ್ಪನಿಕ ಭೂತದ ಬಗ್ಗೆ TV ಮಾಧ್ಯಮಗಳಲ್ಲಿ ಅಬ್ಬರಿಸುತ್ತಿದ್ದ ಸುದ್ದಿಗಳನ್ನು ಪ್ರತೀ ದಿನ ತಪ್ಪದೆ ಅವನು ನೋಡುತ್ತಿದ್ದ. ಸಾವಿರಾರು ಜನ ಸಾಯುತ್ತಿರುವ ದೃಶ್ಯಗಳನ್ನ ನೋಡಿ ದಿಗಿಲುಗೊಂಡ. ಈತನಿಗೆ ಜ್ವರ, ನೆಗಡಿ, ಕೆಮ್ಮು ಯಾವುದೇ ರೀತಿಯ ಕಾಯಿಲೆ ಇರಲಿಲ್ಲ. ಆದರೂ ಯಾವುದೋ ಮಾಧ್ಯಮ ಸಂದರ್ಶನದಲ್ಲಿ ನೋಡಿ ರಕ್ತದ ಆಮ್ಲಜನಕ ಪತ್ತೆಹಚ್ಚುವ ಮಾಪನವನ್ನು (Pulse Oximeter 👇) ಜೊತೆಯಲ್ಲಿ ಇಟ್ಟುಕೊಂಡ. ಮನೆಯಲ್ಲಿ ಕುಳಿತಾಗ, ತೋಟಕ್ಕೆ ಹೋದಾಗ, ಊರಲ್ಲಿ ನಡೆದಾಡುವಾಗ Oximeter ನ ಬೆರಳ ತುದಿಗೆ ಆಗಾಗ್ಗೆ ಇಟ್ಟುಕೊಂಡು ಆತಂಕಗೊಳ್ಳುತ್ತಿದ್ದ.
ಆತಂಕದಲ್ಲಿದ್ದಾಗ ಸ್ವಲ್ಪ ಏರು ಪೆರು ಕಾಣುವುದು ಸಹಜ. ತಕ್ಷಣ ಉಸಿರಾಟಕ್ಕೆ ತೊಂದರೆ ಆಗುತ್ತಿದೆ ಎಂಬ ಭಾವನೆ ಸ್ವತಃ ಮೂಡಿಸಿಕೊಂಡ, ಭಯದಿಂದ ಬೆವರುತ್ತಾ ಆಸ್ಪತ್ರೆಗೆ ದಾಖಲಾಗಿ ಕೇವಲ 40 ನಿಮಿಷದಲ್ಲಿ ಭಯದಿಂದಲೇ ಬೆವರುತ್ತಾ ಪ್ರಾಣ ಬಿಟ್ಟುಬಿಟ್ಟ.

ಗುಂಡುಕಲ್ಲಿನಂತಿದ್ದ ಆರೋಗ್ಯಕರ ಸದೃಢ ದೇಹ ಹೊಂದಿದ್ದ ಈತನ ಸಾವು ಇಡೀ ಗ್ರಾಮದಲ್ಲಿ ಜೀರ್ಣಿಸಿಕೊಳ್ಳಲಾಗಲಿಲ್ಲ. ಮಾಧ್ಯಮಗಳು ಸೃಷ್ಟಿಸಿದ ಕರೊನ ಹೆಸರಿನ ಭೂತಕ್ಕೆ ಹೆದರಿ ಈ ರೀತಿಯಾಗಿ ಅದೆಷ್ಟೋ ಅಮಾಯಕ ಮುಗ್ಧ ಜೀವಗಳು ಬಲಿಯಾಗಿವೆ ಎಂದನಿಸುತ್ತೆ.

ಜನರಿಗೆ ಅರಿವು ಮೂಡಿಸಬೇಕಾದ ಮಾಧ್ಯಮ ಅಂಗವೇ ಈ ರೀತಿಯಾಗಿ ಆತಂಕ ಸೃಷ್ಟಿಸಿ ಜನರನ್ನು ದಾರಿತಪ್ಪಿಸುತ್ತಿರುವುದು ಸಮಾಜಕ್ಕೆ ಮಾರಕವೇ ಸರಿ. ಈಗಿನ ಕೆಲ ಮಾಧ್ಯಮಗಳು ಮಾಹಿತಿ ಬಿತ್ತರಿಸುವ ವೈಖರಿ ಖಂಡಿತವಾಗಿಯೂ ಬದಲಾಗಬೇಕಿದೆ ಎಂಬುದು ನನ್ನ ಅಭಿಪ್ರಾಯ.


- ರಾಘವೇಂದ್ರ. ಜಿ. ಶ್ರೀರಾಮಯ್ಯ
 9060660060           

Comments

  1. ಸತ್ಯವಾದ ಮಾತು..... ಇದಕ್ಕೆ ಒಂದೇ ಪರಿಹಾರ ಎಲ್ಲಾ ಖಾಸಗಿ ಸುದ್ದಿವಾಹಿನಿ ನೋಡುವ ಬದಲು ಚಂದನ ನೋಡಿ ಸುಖವಾದ ಜೀವನ ಮಾಡಿ.

    ReplyDelete
  2. From Vijay Aradhya N (FB);

    Nija, sudhi vahini galu madtiro kelsa nea hidu janaregea baya tarisitrodu

    ReplyDelete
  3. From Chethan S (What's App);

    Very sad n shocking..

    ReplyDelete
  4. From Rajesh ( What's App);

    Tragedy of current situation..😓

    ReplyDelete
  5. From Chandrakala (What's App);

    [26/01, 7:36 pm] Chandrakala Akka: Where it has happened

    [26/01, 7:36 pm] Raghavendra G SriRamaiah: In our village Akka

    [26/01, 7:37 pm] Chandrakala Akka: Oh... very sad

    ReplyDelete

Post a Comment

ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಮನೋಜ್ಞ ಮಾದರಿ

ಅಪ್ಪಾ... Ex-MP ಎಂದರೇನು?

ಅಸಲಿ ರೈತ, ನಕಲಿ ಪ್ರೀತಿ.!

ರೈತರೆಲ್ಲ ಶ್ರೀಮಂತರಾಗುತ್ತಾರಂತೆ.!

ಸಾರ್ಥಕ ನಿವಾಸ

ಹೇಗಿದ್ದಾರೆ ಮೇಷ್ಟ್ರು..?