ನೀಗಿಸದೆ ಬರಿ ಹಸಿವ, ಮಾಡವರ ಸಧೃಡವ...


ಶಿಶುವಿಹಾರ ದಿಂದ ಹಿಡಿದು ಕಾಲೇಜಿನ ವರೆಗೆ ಪ್ರತೀ ಮಕ್ಕಳಿಗೆ ಒಂದು ಹಿಡಿಯಷ್ಟು ಮೊಳಕೆ ಕಟ್ಟಿದ ಹಸಿ ಕಾಳುಗಳು (Sprout Salad) ಮತ್ತು ಬೇಯಿಸಿದ ಸೊಪ್ಪು-ತರಕಾರಿ ಕಡ್ಡಾಯವಾಗಿ ನೀಡಬೇಕು ಎಂಬ ನಿಯಮ ಜಾರಿಯಾದರೆ ಮುಂದಿನ ಪೀಳಿಗೆಯ ಕನಿಷ್ಠ ಮಟ್ಟದ ಪೌಷ್ಟಿಕತೆಯ ಜೊತೆಗೆ ಸದೃಢ ಆರೋಗ್ಯ ದೊರಕಿಸಿ ಕೊಡಬಹುದು.

ಒಣ ಹಸಿವು ನೀಗಿಸಿದರೆ ಸಾಕೆ?
  • ಸರ್ಕಾರದ ಕಡೆಯಿಂದ ಬಿಸಿಯೂಟ ವ್ಯವಸ್ಥೆ ಅಥವಾ ಮಕ್ಕಳು ಶಾಲೆಗೆ ಒಯ್ಯುವ ಬುತ್ತಿಯಿಂದ ಬರೀ ಹಸಿವನ್ನ ನೀಗಿಸಬಹುದೇ ಹೊರತು ಅಪೌಷ್ಟಿಕತೆಯನ್ನಲ್ಲ.
  • ಬಾಲ್ಯದಿಂದಲೂ ಅಪೌಷ್ಟಿಕತೆಯಿಂದ ಕುಗ್ಗಿರುವ ವಿವಾಹಿತ ಹೆಣ್ಣುಮಕ್ಕಳು ಗರ್ಭಧಾರಣೆಯಾದ ನಂತರ ಮಾತ್ರ ಹಣ್ಣು-ಹಂಪಲು ಕೊಟ್ಟರೆ ಪರಿಣಾಮಕಾರಿ ಇರುವುದಿಲ್ಲ.
  • ಮನೆಯಲ್ಲಿ ಎಷ್ಟೇ ಪ್ರಜ್ಞಾವಂತ ಪೋಷಕ ವರ್ಗ ಇದ್ದರೂ ಸಹ ತಮ್ಮ ಮಕ್ಕಳಿಗೆ ಪ್ರತಿದಿನ ಪೌಷ್ಟಿಕ ಆಹಾರ ನೀಡುವಲ್ಲಿ ವಿಫಲರಾಗಿರುತ್ತಾರೆ. ಅಥವಾ, ಮಕ್ಕಳು ತಿನ್ನಲು ನಿರಾಕರಿಸುತ್ತಾರೆ. 
ಸದೃಢ ಹೇಗೆ ಮಾಡಬಹುದು?
3 ದಿನ ಮೊಳಕೆ ಕಟ್ಟಿದ ಹಸಿ ಕಾಳುಗಳು;
2 ದಿನ ಬೇಯಿಸಿದ ಸೊಪ್ಪು-ತರಕಾರಿ;
  • ಶಾಲೆಯ/ಕಾಲೇಜಿನ ಸಮಯದಲ್ಲಿ 20 ನಿಮಿಷ ಕಡ್ಡಾಯವಾಗಿ ಪೌಷ್ಟಿಕತೆಯ ಆಹಾರ ಸೇವನೆಗೆ ಅಂತ ಮೀಸಲಿಟ್ಟರೆ ಒಳಿತು.
  • ಈ ವ್ಯವಸ್ಥೆ ದೇಶದೆಲ್ಲೆಡೆ ರಾಜ್ಯ/ಕೇಂದ್ರ ಸರ್ಕಾರ'ಗಳು ಮಾಡಲು ಸಾಧ್ಯವಿದೆ. ಆದರೆ ಮಾಡುವ ಇಚ್ಛಾಶಕ್ತಿ ಬೇಕಿದೆ ಅಷ್ಟೇ.
  • ಅಥವಾ ಸಮಾಜ ಸೇವಕರ, ಮಠ, ಸಂಘ ಸಂಸ್ಥೆಗಳ ನೆರವಿನಿಂದ ಆಯಾ ಜಿಲ್ಲಾ/ತಾಲೂಕು ಮಟ್ಟದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ನೀಡಬಹುದು.
  • ಖಾಸಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ನೀಡಲು ಆಡಳಿತ ಮಂಡಳಿಯವರು ಜವಾಬ್ದಾರಿ ವಹಿಸಿಕೊಂಡರೆ ಒಳಿತು. ಪೋಷಕರಿಂದ ಇದಕ್ಕಾಗಿ ಹೆಚ್ಚುವರಿ ಶುಲ್ಕ ಪಡೆಯಬೇಕೆ ಎಂಬುದು ಚರ್ಚೆಗೆ ಬಿಟ್ಟಿದ್ದು.
  • ಇದರಿಂದ ರೈತರು ಬೆಳೆದ ಫಸಲಿಗೂ ಬೇಡಿಕೆ ಇರುತ್ತೆ.
  • ಬಹುಮುಖ್ಯವಾಗಿ ಮಕ್ಕಳಿಗೆ ಸ್ವಲ್ಪ ಪ್ರಮಾಣದ ಪೌಷ್ಠಿಕತೆಯ ಕೊರತೆಯನ್ನ ನೀಗಿಸಬಹುದು.
ಸಂಬಂಧಪಟ್ಟ Block Education Officer (BEO) ಅಧಿಕಾರಿಯ ಸಲಹೆ ಮತ್ತು ಅನುಮತಿ ಪಡೆದು ನಮ್ಮ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಒಂದು-ಹಿಡಿಯಷ್ಟು ಪೌಷ್ಟಿಕ ಆಹಾರ ನೀಡುವ ಆಸೆಯಂತೂ ಇದೆ. 

ಈ ಕಾರ್ಯಕ್ರಮ ಪ್ರತಿದಿನ ನಿರಂತರವಾಗಿ ನಡೆಸುವ ಸಲುವಾಗಿ ಸಾಧಕ-ಬಾಧಕ'ಗಳ ಬಗ್ಗೆ ಯೋಚನೆ ನೆಡೆಯುತ್ತಿದೆ. ವೈಯುಕ್ತಿಕವಾಗಿ, ಸ್ನೇಹಿತರ ಹಾಗೂ ಸಮಾಜ ಸೇವೆ ಮನೋಭಾವ ಇರುವ ಕೆಲವರ ಸಹಕಾರದಿಂದ ಮಾಡಬಹುದೆಂಬ ಆಶಾಭಾವನೆ ಇದೆ. ಯಶಸ್ವಿಯಾದರೆ ವಿಸ್ತರಿಸಬಹುದು ಕೂಡ.

ಈ ರೀತಿಯಾಗಿ ತಮ್ಮ ತಮ್ಮ ಗ್ರಾಮದ/ಪಟ್ಟಣದ ವ್ಯಾಪ್ತಿಯಲ್ಲಿ ಸಮಾಜಮುಖಿ ಸೇವಾ ಮನೋಭಾವ ಉಳ್ಳವರು ಮುನ್ನಡಿಸಿದರೆ ಮುಂದಿನ ಪೀಳಿಗೆಯ ಕನಿಷ್ಠ ಮಟ್ಟದ ಪೌಷ್ಟಿಕತೆಯ ಸದೃಢ ಆರೋಗ್ಯ ನೀಡಬಹುದು ಎಂಬುದು ನನ್ನ ಅಭಿಪ್ರಾಯ.


- ರಾಘವೇಂದ್ರ. ಜಿ. ಶ್ರೀರಾಮಯ್ಯ
 9060660060           


Comments

  1. True, not just feeding stomach, feed with healthy food.It apply to everyone.

    The thing is, god has given nutrition food but we consunme artificial in medicine.



    ReplyDelete
  2. ಈಗಾಗಲೇ ಎಲ್ಲಾ ಕಾಳುಗಳು ಗಗನಕ್ಕೇರಿದೆ ಆದ್ದರಿಂದ ಈ ಒಂದು ಐಡಿಯಾ ಜಾರಿ ಮಾಡುವುದು ಸ್ವಲ್ಪ ಕಷ್ಟವೇ ಸರಿ ಸರ್ಕಾರ ಇದನ್ನು ಜಾರಿ ಮಾಡಬೇಕಾದರೆ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿಕೊಂಡು ಜಾರಿಗೊಳಿಸಬೇಕು ಇಲ್ಲವಾದರೆ ಎಲ್ಲ ಬಗೆಯ ಕಾಳಿನ ಶಾರ್ಟೇಜ್ ಉಂಟಾಗಬಹುದು ಹಾಗೂ ಅದರ ಬೆಲೆ ಮತ್ತಷ್ಟು ಹೆಚ್ಚಾಗಬಹುದು..... Theoretical ಐಡಿಯಾಸ್ ಅಥವಾ theoritical concepts ಪ್ರಾಕ್ಟಿಕಲ್ ಆಗಿ ಸರಿಹೊಂದುವುದಿಲ್ಲ..... ಹಾಗಾಗಿ ಎಲ್ಲಾ ರೀತಿಯ ಆಯಾಮಗಳನ್ನು ಪರಿಗಣಿಸಿ ಇದನ್ನು ಜಾರಿಗೊಳಿಸಬೇಕಾಗಿದೆ ಎಂದು ನನ್ನ ಅಭಿಪ್ರಾಯ.

    ಇಂತಿ ಅನಿಸಿಕೆ ಅಭಿಪ್ರಾಯ ಅಂಕಣದ ಓದುಗ😊

    ReplyDelete

Post a Comment

ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಮನೋಜ್ಞ ಮಾದರಿ

ಅಪ್ಪಾ... Ex-MP ಎಂದರೇನು?

ಅಸಲಿ ರೈತ, ನಕಲಿ ಪ್ರೀತಿ.!

ಹೇಗಿದ್ದಾರೆ ಮೇಷ್ಟ್ರು..?

ಸಾರ್ಥಕ ನಿವಾಸ

ರೈತರೆಲ್ಲ ಶ್ರೀಮಂತರಾಗುತ್ತಾರಂತೆ.!