ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ


ಸಂಗೀತದ ಮಹಾಗುರುಗಳು ಎಂದೇ ಖ್ಯಾತಿಯಾಗಿರುವ ನಾದಬ್ರಹ್ಮ ಹಂಸಲೇಖ ಒಂದು ಕಡೆ, ಮತ್ತೊಂದು ಕಡೆ ದಿವಂಗತ ಪೂಜ್ಯ ಪೇಜಾವರ ಶ್ರೀ ಯತಿವರ್ಯರ ಹೆಸರು ಬಳಸಿ ಪಂಗಡದ ಶಕ್ತಿಪ್ರದರ್ಶನ.

ಕ್ಷಮೆ ಎಂಬ ಪದಕ್ಕೆ ಅನರ್ಥವಾಗುವಂತೆ ಹಂಸಲೇಖ ರವರ ಮೇಲೆ ಏರುತ್ತಿರುವ ಮಾನಸಿಕೆ ಒತ್ತಡ ಮತ್ತು ವೈಯುಕ್ತಿಕ ತೇಜೋವಧೆ ಮಾಡುತ್ತಿರುವುದು ಖಂಡನೀಯ. ಪೂಜ್ಯ ಪೇಜಾವರ ಶ್ರೀಗಳು ಬದುಕಿದಿದ್ದರೆ ತಮ್ಮ ಪಂಗಡದವರು ಮಾಡುತ್ತಿರುವ ವೈಯುಕ್ತಿಕ ದಾಳಿ ನೋಡಿ ಅವರು ಕೂಡ ಮರುಗುತ್ತಿದ್ದರೋ ಏನೋ. 

ಶ್ರೀಗಳು ಮೇಲ್ಜಾತಿ-ಕೆಳಜಾತಿ ನಿರ್ಮೂಲನೆ ಮಾಡುವ ದಿಶೆಯಲ್ಲಿ ಪ್ರಯತ್ನ ಪಟ್ಟವರು. ಯಾವುದೇ ವಿಷಯ ಅಥವಾ ಮಾತುಗಳು ಆರೋಗ್ಯಕರ ಚರ್ಚಾಸ್ಪದ ಆಗಿರಬೇಕು ಎಂಬುದು ಶ್ರೀಗಳ ಆಶಯವಿತ್ತು ಕೂಡ. ಹಾಗಾಗಿ, ಅವರ ಸಮೂಹ ವ್ಯಕ್ತಿಗತವಾಗಿ ಗದಪ್ರಹಾರ ಮಾಡುತ್ತಿರುವುದು ಪೇಜಾವರ ಯತಿವರ್ಯರ ಆಶಯಕ್ಕೆ ತದ್ವಿರುದ್ಧವಾಗಿದೆ ಎಂಬುದು ನನ್ನ ಅನಿಸಿಕೆ.

ಇವುಗಳ ಮದ್ಯೆ ಸಾಧನೆ/ಸಾಧಕ ಎಂಬುದಕ್ಕೆ ಬೆಲೆಯೇ ಇಲ್ಲದಂತಾಗಿದೆ. ಸುಮಾರು 40 ವರ್ಷಗಳ ಕಾಲ ಶ್ರಮವಹಿಸಿ ಕೋಟ್ಯಾಂತರ ಜನರ ಮನಸ್ಸಿಗೆ ಸಂತೋಷ ಉಣಬಡಿಸುತ್ತಿದ್ದಾರೆ. ಅವರ ಸಂಗೀತ ಕ್ಷೇತ್ರದ ಸಾಧನೆ ಪಂಗಡದ ಪ್ರಾಬಲ್ಯದ ಮುಂದೆ ಶೂನ್ಯವಾಗಿಬಿಟ್ಟಿದೆ ಎಂಬುದು ದುಃಖಕರ ಸಂಗತಿ.

ಒಂದು ಕಡೆ ಜಾತಿ-ಪದ್ಧತಿ ನಿರ್ಮೂಲನೆ ಮಾಡಬೇಕು ಎಂಬ ಹೆಬ್ಬಯಕೆ ಕೆಲವರದ್ದು, ಮತ್ತೊಂದು ಕಡೆ ನಮ್ಮ ಜಾತಿ ಬಲವರ್ಧನೆ ಮಾಡಬೇಕು ಎಂಬ ದುರಾಲೋಚನೆ. ಇವುಗಳ ಮದ್ಯೆ ಒದ್ದಾಡುತ್ತಿರುವ ಕೆಳಜಾತಿಯ ಜನ.

ಬ್ರಹ್ಮ-ವಿದ್ಯೆ ಅರಿತವರ ಪಂಗಡ ಎಂದು ಹೇಳಿಕೊಳ್ಳುವ ವಿದ್ಯಾವಂತರೇ ಜಾತಿಯ ದರ್ಪ, ಪ್ರಾಬಲ್ಯ ತೋರುವ ದುಂಬಾಲು ಬಿದ್ದರೆ ಜಾತಿ-ಪದ್ಧತಿ ನಿರ್ಮೂಲನೆ ಹೇಗೆ ಸಾಧ್ಯ?

ಕೋಟ್ಯಂತರ ಜನರಿಗೆ ಈ ಕೆಳಮಟ್ಟದ ಪ್ರತಿಭಟನೆಗಳು ಸರಿಯಲ್ಲ ಎಂದನಿಸಿದರು ಸಹ ಬಾಹ್ಯಾವಾಗಿ ಹೇಳುವ ಧೈರ್ಯ ಮಾಡುತ್ತಿಲ್ಲ ಅಥವಾ ಹಂಸಲೇಖ ರವರ ಬೆಂಬಲಕ್ಕೆ ನಿಲ್ಲುತ್ತಿಲ್ಲ - ಕಾರಣ, ಹಲವಾರು ಲೆಕ್ಕಾಚಾರಗಳು ಮತ್ತು ಭಯ.

ಹಂಸಲೇಖ ರವರ ಮಾತುಗಳು ಸಮಾಜದಲ್ಲಿ ಆರೋಗ್ಯಕರ ಚರ್ಚೆಗೆ ಅಸ್ಪದವಾಗಿರಬೇಕಿತ್ತೇ ಹೊರತು ಪ್ರತಿಭಟನೆಗಲ್ಲ. ಅಥವಾ, ಪ್ರತಿಭಟನೆ ಮಾಡಿ/ಮಾಡಿಸಿ ತಮ್ಮ ಸಮುದಾಯದವರ ರಾಜಕೀಯ ಬೆಂಬಲ ಪಡೆಯುವ ಗೀಳು ಕೆಲವರಿಗೆ ಇರಬಹುದಾ?


- ರಾಘವೇಂದ್ರ. ಜಿ. ಶ್ರೀರಾಮಯ್ಯ
 9060660060           

Comments

  1. ಆತ್ಮೀಯ ರಾಘು, ನಾನು ಯಾರ ಪರ ಮತ್ತು ವಿರೋಧಿಯಾಗಿ ಮಾತಾನಾಡದೆ ಒಂದು ಪುರಾಣದ ಸನ್ನಿವೇಶ ಪ್ರಸ್ತಾಪಿಸುವೆ.
    ನಿನಗೆ ಅರಿವಿರುವಂತೆ ರಾಜ ವಿಕ್ರಮಾದಿತ್ಯ ಅತ್ಯಂತ ಜನಪ್ರಿಯ ಚಕ್ರವರ್ತಿಯಾಗಿರುತ್ತಾನೆ. ಈತ ದಾನ ಧರ್ಮಗಳನ್ನು ಮಾಡುತ್ತ ಜನಪರವಾಗಿ ಧೈವಭಕ್ತನಾಗಿರುವಾಗ ಶನಿ ಮಹಾರಾಜನು ಈತನ ಹೇಗಲೇರಿ ರಾಜ್ಯ ಪದವಿಗಳನ್ನು ಕಳೆದುಕೊಂಡು ಕಾಡು ಮೇಡುಗಳನ್ನು ಅಲೆದು, ಕೊನೆಗೆ ಗಾಣಿಗರ ಮನೆಯಲ್ಲಿ ಕೆಲಸ ಸಿಕ್ಕಿ, ಒಂದು ರಾತ್ರಿ ಅವನ ಕೋಣೆಯ ಗೋಡೆಗೆ ನೇತು ಹಾಕಿದ ಪಾರಿವಾಳ ಚಿತ್ರವಿರುವ ಕ್ಯಾಲೆಂಡರ್ ನಿಂದ ಪಾರಿವಾಳ ಹಾರಿ ಬಂದು ಗಾಣಿಗರ ಮಗಳ ಮುತ್ತಿನ ಸರ ನುಂಗಿ ಬಿಡುತ್ತೆ, ಚಕಿತನಾಗಿ ಕಂಡ ವಿಕ್ರಮನಿಗೆ ಎನು ತೋಚದೆ ಮಲಗಿ ಬಿಡುತ್ತಾನೆ.
    ಮುಂಜಾನೆ ದೊಡ್ಡ ರದ್ಧಾಂತ ಮಾಡಿದ ಗಾಣಿಗರ ಮಗಳು ವಿಕ್ರಮನನ್ನು ಕಳ್ಳನೆಂದು ಹೇಳಿ ನಿಂದಿಸುತ್ತಾಳೆ.
    ರಾತ್ರಿ ನೆಡೆದ ಘಟನೆಯನ್ನು ವಿವರಿಸಲು ಯಾರು ನಂಬುವುದಿಲ್ಲ, ಕೊನೆಗೆ ಸೈನಿಕರು ಬಂದು ಆ ಪ್ರದೇಶದ ರಾಜನ ಬಳಿ ಕೊಂಡ್ಯೊತ್ತಾರೆ.
    ಹೀಗೆ ವಿಕ್ರಮನ ಕತೆ ಮುಂದುವರೆಯುತ್ತೆ.
    ಶನಿ ಒಮ್ಮೆ ಹೆಗಲೇರಿದರೆ ರಾಜಾದಿರಾಜರು, ಚಕ್ರವರ್ತಿಗಳು ತಮ್ಮ ರಾಜ್ಯಗಳನ್ನು ಕಳೆದುಕೊಂಡು ಕಷ್ಟ ಅನುಭವಿಸಿದ್ದಾರೆ.
    ಪಾಪ ನಾದಬ್ರಹ್ಮನ ನಾಲಿಗೆ ಮೇಲೆ ಶನಿ ಕುಳಿತಿದ್ದನೇನೋ....
    ಶನಿಯ ಆಟ ಬಲ್ಲವರಾರು...

    ನಿನ್ನ ಅನಿಸಿಕೆ ಅಭಿಪ್ರಾಯ ಚೆನ್ನಾಗಿ ಮೂಡಿ ಬರುತ್ತಿದೆ.
    ಅಭಿನಂದನೆಗಳು.
    ಸತೀಶ ಬಸವಾರಾಧ್ಯ
    ಕೆ ಆರ್ ಪುರ

    ReplyDelete
  2. Yes it's true, but not possible to remove the differences

    ReplyDelete

Post a Comment

ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಮನೋಜ್ಞ ಮಾದರಿ

ಅಪ್ಪಾ... Ex-MP ಎಂದರೇನು?

ಅಸಲಿ ರೈತ, ನಕಲಿ ಪ್ರೀತಿ.!

ರೈತರೆಲ್ಲ ಶ್ರೀಮಂತರಾಗುತ್ತಾರಂತೆ.!

ಸಾರ್ಥಕ ನಿವಾಸ

ಹೇಗಿದ್ದಾರೆ ಮೇಷ್ಟ್ರು..?