ವ್ಯವಸ್ಥೆ ಬದಲಾಗಬೇಕಿದೆ... ಅನುಭವದ ಮಾತು.!

ಸುಮಾರು ಐದು ವರ್ಷಗಳ ಹಿಂದೆ "ಖಾತ ವರ್ಗಾವಣೆ" ಮಾಡಿಸಿಕೊಳ್ಳುವ ಸಲುವಾಗಿ BBMP ಕಚೇರಿಗೆ ಸ್ವತಃ ಅರ್ಜಿ ಹಾಕಿ, 2 ತಿಂಗಳ ಕಾಲ ಅಲೆದು, ಸಾಕಾಗಿ ಕಡೆಗೆ ಏನೋ ಒಂದಿಷ್ಟು ಕೊಟ್ಟು ಕೆಲಸ ಮಾಡಿಸಿಕೊಳ್ಳುವ ಯೋಚನೆ ಮಾಡುತ್ತಿದ್ದೆ.

ಈ ವಿಚಾರವನ್ನ ನನ್ನ ಸಹೋದ್ಯೋಗಿ-ಗೆಳೆಯನ ಜೊತೆ 'ಟೀ' ಕುಡಿಯುತ್ತ "ಸರ್ಕಾರಿ ಸ್ವಾಮ್ಯದ ಕಛೇರಿಗಳಲ್ಲಿ ದುಡ್ಡು ಕೊಡದೆ ಯಾವ ಕೆಲಸವು ಆಗೋದಿಲ್ಲ ಅನ್ಸುತ್ತೆ" ಎಂದು ತುಂಬಾ ಬೇಸರದಿಂದ ಹೇಳಿದೆ.

ತಕ್ಷಣ ಅವನು - "ನೀವ್ ಯಾಕ್ ರಿ ದುಡ್ಡು ಕೊಡ್ತೀರಾ. ನೀವು ತಿಳಿದವರು... ಆ ತರ ದುಡ್ಡು ಕೊಟ್ಟು ಕೆಲಸ ಮಾಡಿಸಿಕೊಳ್ಳುವುದು ತಪ್ಪು" ಎನ್ನುತ್ತಾ, ಒಂದಿಷ್ಟು ಗಾಂಧಿ ತತ್ವಗಳನ್ನ ಹೇಳಿದ್ದ.

ಕಳೆದ ವಾರ ಅದೇ ಗೆಳೆಯ ನನಗೆ ಕರೆ ಮಾಡಿ "ರೀ ರಾಘು, ನೀವು ಖಾತ ವರ್ಗಾವಣೆ ಮಾಡಿಸಿಕೊಳ್ಳೋಕೆ extra ಎಷ್ಟು ಆಯ್ತು...?" ಎಂದು ಕೇಳಿದ.

ಅವನು ಕೇಳಿದ ಹಿನ್ನೆಲೆ ಮತ್ತು ಭಾವರ್ಥ ನನಗೆ ಕೂಡಲೇ ತಿಳಿಯಿತು. ಆದರೂ, ನಗು-ನಗುತ್ತಾ... ಯಾಕಪ್ಪಾ ಅದು ಈಗ? ಎಂದು ಮರು ಪ್ರಶ್ನಿಸಿದೆ.

"ಅಲ್ಲಾ ರೀ... ನನ್ನ ನಿವೇಶನದ ಖಾತ ವರ್ಗಾವಣೆಗೆಂದು ಅರ್ಜಿ ಹಾಕಿ 2-3 ತಿಂಗಳು ಆಯ್ತು. ಕೆಲಸ ಮಾಡದೆ ಸತಾಯಿಸುತ್ತಿದ್ದಾರೆ. ಅದಕ್ಕೆ ಏನೋ ಒಂದಿಷ್ಟು ಹೆಚ್ಚು ಕಡಿಮೆ ಕೊಟ್ಟು ಕೆಲಸ ಮಾಡಿಸಿಕೊಳ್ಳೋಣ ಅಂತ ಯೋಚನೆ ಮಾಡ್ತಾ ಇದೀನಿ" ಎನ್ನುತ್ತಾ... ಸರ್ಕಾರದ ನಿಗದಿತ ಶುಲ್ಕಕ್ಕಿಂತ ದುಪ್ಪಟ್ಟು ಹಣ ಖರ್ಚು ಮಾಡುವಂತಾಗಿದೆ. ಏನ್ರಿ... ಇದೆಲ್ಲ ಎಂತಹ ಅಕ್ರಮ, ಥೂ... ಹೊಟ್ಟೆ ಹುರಿಯುತ್ತೆ ಎಂದು ಪೇಚಾಡಿದ.

ಐದು ವರ್ಷಗಳ ಹಿಂದೆ ಈತನೇ ನನಗೆ ಗಾಂಧಿ ತತ್ವ-ಬೋಧನೆ ಮಾಡಿದ್ದನ್ನ ಅವನಿಗೆ ನೆನಪಿಸಿದೆ. ಇಬ್ಬರು ನಗುತ್ತಾ, ಈಗಿನ ವ್ಯವಸ್ಥೆಗೆ ಹೊಂದಿಕೊಂಡು ಹೋಗದಿದ್ದರೆ ಕಷ್ಟ-ನಷ್ಟ ನಮಗೇನೆ ಅಂದುಕೊಂಡೆವು.

ಈ ರೀತಿಯ ಅನಗತ್ಯ ವಿಳಂಬ, ಭ್ರಷ್ಟಾಚಾರ ತಡೆಯುವ ಸಲುವಾಗಿ ಮಾನ್ಯ ಸದಾನಂದಗೌಡರು ಮುಖ್ಯಮಂತ್ರಿ ಆಗಿದ್ದಾಗ "ಸಕಾಲ" ಎಂಬ ಸೇವೆಯನ್ನು ಅನುಷ್ಠಾನಕ್ಕೆ ತಂದಿದ್ದರು. ಆದರೆ, ಇಂತಹ ಒಳ್ಳೆಯ ಜನಪರ ಸೇವೆಗಳು ಅತ್ಯಂತ ಪರಿಣಾಮಕಾರಿಯಾಗಿ ನಡೆಯುತ್ತಿದೆಯ ಎಂಬುದು ಪ್ರಶ್ನಾರ್ಹ?

ನೀನು ಚಾಪೆ ಕೆಳಗೆ ತೂರಿದರೆ, ನಾನು ರಂಗೋಲಿ ಕೆಳಗೆ ನುಸುಳುತ್ತೇನೆ; ಭ್ರಷ್ಟಾಚಾರವೇ ನನ್ನ ಮೂಲ ಕರ್ತವ್ಯ; ಎಂಬ ಮನಸ್ಥಿತಿ ಉಳ್ಳ ನೌಕರರಿಗೆ (ಪ್ರಾಮಾಣಿಕರನ್ನ ಹೊರತುಪಡಿಸಿ) ಯಾವ ಕಾಯ್ದೆಗಳು ಅಡ್ಡಿಯಾಗುವುದಿಲ್ಲ.
  • ಹೀಗಿರುವಾಗ, ತನ್ನ ಜೀವನದ ಜಂಜಾಟಗಳ ನಡುವೆ ಈ ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಡಲು ಅಶಕ್ತನಾಗಿರುವ ಅಮಾಯಕ ಜನರನ್ನ ಏಕೆ ಭ್ರಷ್ಟಾಚಾರದ ಭಾಗಿತ್ವ ಎಂದು ಆರೋಪಿಸುತ್ತೇವೆ?
  • ಈ ಮಾತಿನ ತಾತ್ಪರ್ಯ ಇಷ್ಟೇ - ಜನ ಬದಲಾಗುತ್ತೇನೆ ಎಂದು ಬಯಸಿದರೆ ಅದು ವಿಫಲ ಪ್ರಯತ್ನವಾದೀತು. ಅದಕ್ಕಾಗಿ "ವ್ಯವಸ್ಥೆ ಬದಲಾಗಬೇಕಿದೆ". 👇
ಸುರಕ್ಷತೆ, ಭದ್ರತೆಗೆ ಸಂಬಂಧಪಟ್ಟ ಇಲಾಖೆಗಳು ಬಿಟ್ಟು ಉಳಿದೆಲ್ಲ ಸರ್ಕಾರಿ ಇಲಾಖೆಗಳ ಕೆಲಸಗಳನ್ನು ನಂಬಿಕಾರ್ಹ ಖಾಸಗಿ ಕಂಪನಿಗಳ ಜೊತೆಗೂಡಿ ಕಾರ್ಯವೈಖರಿ ನಡೆಸುವುದು ಒಳ್ಳೆಯದು ಅನಿಸುತ್ತೆ - ಇದು ಖಾಸಗೀಕರಣವಲ್ಲ.
  • ನೈಜ ಉದಾಹರಣೆ: Passport ಇಲಾಖೆಯಲ್ಲಿ ಖಾಸಗಿ ಕಂಪನಿಯ ಸಹಭಾಗಿತ್ವದಲ್ಲಿ ಬಹಳ ಚೆನ್ನಾಗಿ ಜನರಿಗೆ ಸೇವೆಗಳನ್ನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಮಾದರಿಯಲ್ಲಿ ಸರ್ಕಾರದ ಕೆಲಸಗಳನ್ನು Infosys, Tata (TCS) ಇಂತಹ ನಂಬಿಕಾರ್ಹ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾರ್ಯವೈಖರಿ ನಡೆಸಿದರೆ ಭ್ರಷ್ಟಾಚಾರ, ವಿಳಂಬನೀತಿ, ಸ್ವಜನ-ಪಕ್ಷಪಾತ, ಧೋರಣೆ ಇಂತಹುಗಳನ್ನ ಮಟ್ಟಹಾಕಬಹುದು ಎಂಬುದು ನನ್ನ ಅಭಿಪ್ರಾಯ.


- ರಾಘವೇಂದ್ರ. ಜಿ. ಶ್ರೀರಾಮಯ್ಯ
9060660060              




Comments

  1. From Vijith (What's App):
    ----------------------------------------
    I don't know but I think that won't work... Because then we need to hire more people and too many managing hierarchy and then again corruption. At that scale it is very hard to micro manage corruption. For example during note ban the leading convertion was made buy private banks like axis and icici. The managers converted the currency on a commission. If there is an opportunity everyone will try to make money. When some thing like corona did not stop people making money out it. I think people need to uphold their conscience. I think we need to build a generation with good conscience. Tell them what is right is right no matter 100 people do wrong. They should feel guilty when they do wrong with out anyone judging.
    (not everyone is the same there are few exceptions)

    ReplyDelete
  2. Good thought, need change in the system to stop corruption.

    ReplyDelete
  3. The only solution is to build fully automated aplication and user can track where his application currently. If the person is not approved then it should escalate to next level then only corruption reduces. The person should receive the copy via email.


    The government officials asking bribe even for paying property tax. The corruption may reduce only when complete digitization happens and software support should give to big companies

    If protests also won't work, it works only with digitization. Thanks to Sadanada gowda sir for sakala

    ReplyDelete
  4. Good information. We need adopt this system very soon. This idea is good for all the people.

    ReplyDelete

Post a Comment

ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಮನೋಜ್ಞ ಮಾದರಿ

ಅಪ್ಪಾ... Ex-MP ಎಂದರೇನು?

ಅಸಲಿ ರೈತ, ನಕಲಿ ಪ್ರೀತಿ.!

ರೈತರೆಲ್ಲ ಶ್ರೀಮಂತರಾಗುತ್ತಾರಂತೆ.!

ಸಾರ್ಥಕ ನಿವಾಸ

ಹೇಗಿದ್ದಾರೆ ಮೇಷ್ಟ್ರು..?