ತಿರಸ್ಕಾರ ಮನೋಭಾವದ "ಗಾಂಧೀಜಿ ಭಕ್ತಿ"


ನಮ್ಮೆಲ್ಲರ ಬಾಲ್ಯದಿಂದಲೂ ಮಹಾತ್ಮ ಗಾಂಧೀಜಿ ಯವರ ಬಗ್ಗೆ ಗೌರವ, ಹೆಮ್ಮೆ, ಅಭಿಮಾನ ಇದ್ದೇ ಇರುತ್ತೆ. ಆದರೆ ಇತ್ತೀಚೆಗೆ "ರಾಷ್ಟ್ರಪಿತ ಮಹಾತ್ಮ ಗಾಂಧೀಜಿ" ಯವರ ಬಗ್ಗೆ ಒಂದಿಷ್ಟು ಕಿಡಿಗೇಡಿ ಬುದ್ದಿಜೀವಿಗಳು ಬೆಣ್ಣೆಯಲ್ಲಿ ಕೂದಲು ತೆಗೆದ ಹಾಗೆ ಅಪಪ್ರಚಾರ ಮಾಡುತ್ತಿದ್ದಾರೆ ಅನ್ನಿಸುತ್ತೆ.

ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ತಮ್ಮದೇ ಆದ ಕೇಳುಗ-ಅಭಿಮಾನಿ ಸಮೂಹ ಹೊಂದಿರುವ ಕೆಲ ಸಂಘಟಿತ ಬುದ್ದಿಜೀವಿಗಳು ಗಾಂಧೀಜಿಯವರ ಶಾಂತಿಯುತ ಹೋರಾಟವೆಲ್ಲ ಲೆಕ್ಕಕ್ಕೆ ಇಲ್ಲವೆಂಬಂತೆ ಬಿಂಬಿಸುವ ಪ್ರಯತ್ನ ನಡೆಯುತ್ತಿದ್ದಂತಿದೆ...?

ಹೌದು, ದೇಶಕ್ಕೆ ಸ್ವಾತಂತ್ರ್ಯ ದಕ್ಕಿಸಿಕೊಳ್ಳುವ ದಿಶೆಯಲ್ಲಿ ಹಲವಾರು ಕ್ರಾಂತಿಕಾರಿಗಳ ಹೋರಾಟ, ಬಲಿದಾನ ಎಲ್ಲವೂ ಅವಿಸ್ಮರಣೀಯ.

ಆದರೆ ಜ್ಞಾನಿಗಳಂತೆ ವರ್ತಿಸುತ್ತಿರುವ ಕೆಲವು ಅರೆಬೆಂದ ಅಜ್ಞಾನಿಗಳು "ಗಾಂಧಿ ಏನು ಮಾಡಲಿಲ್ಲ" ಎಂಬ ಸಂಕುಚಿತ ಮನೋಭಾವದಿಂದ ಸ್ವಾತಂತ್ರ್ಯ ಹೋರಾಟಗಾರರ ನೆನೆಯುವಲ್ಲೂ ಸಹ ರಾಜಕೀಯ ತಂದುಬಿಟ್ಟಿದ್ದಾರೆ.

ಇನ್ನೂ ಕೆಲವರು ಒಲ್ಲದ ಮನಸ್ಸಿನಿಂದ ನಾಮಕವಸ್ಥೆಗೆ ಗಾಂಧಿ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡು ಒಂದೆರಡು ಪುಕ್ಸಟ್ಟೆ ಬಿಡಿ ಹೂವು ಎಸೆದು ನಾಟಕೀಯ ನಮಸ್ಕಾರ ಮಾಡುತ್ತಾರೆ.

ಮನುಷ್ಯನ ನಿರ್ಧಾರಗಳಲ್ಲಿ ಎಲ್ಲವೂ ಸರಿ ಇಲ್ಲದೆ ಇರಬಹುದು. ಸರಿ-ತಪ್ಪುಗಳ ವಿಮರ್ಶೆ ಕಾಲ-ಕಾಲಕ್ಕೂ ಆರೋಗ್ಯಕರ ಚರ್ಚಾಸ್ಪದ ಆಗಿರಬೇಕು.

ಆದರೆ ಈ ರೀತಿಯ ಭಿನ್ನ ಅಭಿಪ್ರಾಯಗಳು ಮುಂದಿನ ಪೀಳಿಗೆಗೆ ಆಂತರಿಕ ಕಲಹ ಉಂಟು ಮಾಡಬಹುದು.

ಬಾಪೂಜಿಯವರು ಅನುಸರಿಸಿದ ಮಾರ್ಗ, ಅವರ ನೀತಿ ತತ್ವಗಳು ಎಲ್ಲಾ ಪೀಳಿಗೆಗೂ ಅತ್ಯವಶ್ಯಕ.

ಜೈ ಕರ್ನಾಟಕ.!
ಜೈ ಭಾರತ.!


- ರಾಘವೇಂದ್ರ. ಜಿ. ಶ್ರೀರಾಮಯ್ಯ 
9060660060             


Comments

  1. From SN Laxminarayan Sir (Via What's App):

    ಕಿಡಿಗೇಡಿಗಳು ಕಳ್ಳಾಟವನ್ನು ಸರಿಯಾಗಿ ಗುರುತಿಸಿದ್ದೀರಿ...

    ReplyDelete
  2. Its become habit for some people to make it controversial, they don't have knowledge about it and want to become famous. Other counties love India because of peaceful which taught by Gandhi. Many are commenting on Ramayana aswell, they even don't know about it.

    They realize it when things happen in their life.

    ReplyDelete

Post a Comment

ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಅಪ್ಪಾ... Ex-MP ಎಂದರೇನು?

ಮನೋಜ್ಞ ಮಾದರಿ

ಅಸಲಿ ರೈತ, ನಕಲಿ ಪ್ರೀತಿ.!

ರೈತರೆಲ್ಲ ಶ್ರೀಮಂತರಾಗುತ್ತಾರಂತೆ.!

ಸಾರ್ಥಕ ನಿವಾಸ

ಹೇಗಿದ್ದಾರೆ ಮೇಷ್ಟ್ರು..?