ಮಗಳು/ಸೊಸೆ ತವರಿಗೆ ಯಾವಾಗ ಬರಬೇಕು ಅಥವಾ ಹೋಗಬೇಕು?


ಸಂಪ್ರದಾಯ ಪ್ರಕಾರ ಗೌರಿ ಗಣೇಶ ಹಬ್ಬಕ್ಕೆ ಮನೆಯ ಹೆಣ್ಣು ಮಗಳನ್ನು ತವರಿಗೆ ಕರೆದು ಸಡಗರದಿಂದ ಹಬ್ಬ ಆಚರಿಸಿ, ನಂತರ ಮಗಳು ತನ್ನ ಮನೆಗೆ ತೆರಳುವ ಮುನ್ನ ಅರಶಿನ-ಕುಂಕುಮ, ಹೂವು, ಸೀರೆ (ಬಾಗಿನ) ಕೊಟ್ಟು ಕಳಿಸುವ ಪ್ರತೀತಿ ಕಾಲದಿಂದಲೂ ಇದೆ.

ಮನೆಯ ಹೆಣ್ಣು ಮಗಳು ಹಬ್ಬಕ್ಕೆ ಬಂದಾಗ ಮನೆಯ ಜವಾಬ್ದಾರಿ ವಹಿಸಿಕೊಂಡಿರುವ ಮಗ-ಸೊಸೆ ಮುಂದೆ ನಿಂತು ಹಬ್ಬದ ಎಲ್ಲಾ ಕಾರ್ಯಗಳನ್ನ ಮಾಡಿ, ಮನತುಂಬಿ ಮನೆ ಮಗಳಿಗೆ ಬಾಗಿನ ಕೊಟ್ಟು ಹರಸಿ ಕಳಿಸಿಕೊಡಬೇಕು ಎಂದು ಸಹಜವಾಗಿ ಎಲ್ಲಾ ತಂದೆ-ತಾಯಂದಿರು ಬಯಸುತ್ತಾರೆ.

ಹಾಗಾದರೆ; 
  • ಆ ಮನೆಯ ಸೊಸೆಯೂ ಸಹ ತನ್ನ ತವರಿಗೆ ಹಬ್ಬಕ್ಕೆ ಹೋಗಿ ಬಾಗಿನ ಪಡೆಯಬೇಕು ಎಂಬ ಬಯಕೆ ಪಟ್ಟಿದ್ದಲಿ ಈ ಹೆಣ್ಣು ಮಗಳಿಗೆ ಬಾಗಿನ ಕೊಡುವುದು ಯಾರು? 
  • ತಾಯಿ ಪಾತ್ರ ವಹಿಸಿರುವ ಅತ್ತಿಗೆ ಹಬ್ಬಕ್ಕೆ ತನ್ನ ತವರಿಗೆ ಹೋಗುತ್ತಾರೆ ಎಂಬುದನ್ನು ಮನೆಯ ಹೆಣ್ಣು ಮಗಳು ಅರಿತು ಬೇರೆ ದಿನ ಬರೋದು ಉತ್ತಮ ಇರುತ್ತ?
  • ಮನೆ ಹೆಣ್ಣು ಮಗಳು ಹಬ್ಬಕ್ಕೆ ಬರುತ್ತಾರೆ ಎಂಬುದನ್ನ ಅರಿತ ಸೊಸೆ ತನ್ನ ತವರಿನ ಪ್ರಯಾಣ ಮುಂದಕ್ಕೆ ಹಾಕಿಕೊಳ್ಳುವುದು ಉತ್ತಮ ಇರುತ್ತ?
  • ಹಬ್ಬಕ್ಕೆ ಮಗಳನ್ನು ಕರೆಯುವ ಮುನ್ನ ತಂದೆ-ತಾಯಿಯೇ ತನ್ನ ಮಗಳಿಗೆ ಅರಿವು ಮೂಡಿಸಿ ಮೊದಲು ಆ ಮನೆಯ ಹೆಣ್ಣು ಮಕ್ಕಳ ಆತಿಥ್ಯ ಮಾಡಿ ಹಬ್ಬದ ನಂತರ ಯಾವುದಾದರೂ ಒಂದು ದಿನ ಬಂದು ಅರಿಶಿನ-ಕುಂಕುಮ ತೆಗೆದುಕೊಂಡು ಹೋಗಲು ಹೇಳುವುದು ಉತ್ತಮವಾ?
ಸಂಬಂಧಗಳಲ್ಲಿ ಸಾಮರಸ್ಯ ಇದ್ದರೆ ಇದ್ಯಾವ ಪ್ರಶ್ನೆಯು ಬರುವುದಿಲ್ಲ ಎಂಬುದು ನನ್ನ ಅನಿಸಿಕೆ.


- ರಾಘವೇಂದ್ರ. ಜಿ. ಶ್ರೀರಾಮಯ್ಯ
9060660060               Comments

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಅಪ್ಪಾ... Ex-MP ಎಂದರೇನು?

ಮನೋಜ್ಞ ಮಾದರಿ

ಅಸಲಿ ರೈತ, ನಕಲಿ ಪ್ರೀತಿ.!

ರೈತರೆಲ್ಲ ಶ್ರೀಮಂತರಾಗುತ್ತಾರಂತೆ.!

ಸಾರ್ಥಕ ನಿವಾಸ

ಹೇಗಿದ್ದಾರೆ ಮೇಷ್ಟ್ರು..?