ಪಪ್ಪಾ… ಬಾಂಬ್ ಹಾಕಿ ಸಾಯಿಸಿದರೆ ಅವರಿಗೇನು ಸಿಗುತ್ತೆ?

TV9 ನಲ್ಲಿ ನೆನ್ನೆ ರಾತ್ರಿ 9.30 ರ ಸಮಯದಲ್ಲಿ ಅಫ್ಘಾನಿಸ್ತಾನದ ಪ್ರಸ್ತುತ ಪ್ರಕ್ಷುಬ್ಧ ವಾತಾವರಣದ ಬಗ್ಗೆ ಕಾರ್ಯಕ್ರಮ ನೋಡುತ್ತಿದ್ದೆ. ಪಕ್ಕದಲ್ಲೇ ಕುಳಿತಿದ್ದ ನನ್ನ ಮಗಳು ಕೇಳಿದಳು "ಪಪ್ಪಾ… ಬಾಂಬ್ ಹಾಕಿ ಸಾಯಿಸಿದರೆ ಅವರಿಗೇನು ಸಿಗುತ್ತೆ?" ಎಂದು.

ತಾಲಿಬಾನಿಗಳು ನಡೆಸುತ್ತಿರುವ ಆಕ್ರಮಣ ದಾಳಿಯ ಬಗ್ಗೆ ಚುಟುಕಾಗಿ ಅವಳಿಗೆ ಅರ್ಥ ಆಗುವ ರೀತಿಯಲ್ಲಿ ವಿವರಿಸಿದೆ.

ಅಫ್ಘಾನಿಯರು ಸೂಕ್ತ ರಕ್ಷಣೆ ಇಲ್ಲದೆ ಬೀದಿಗೆ ಬಿದ್ದಿರುವ ದೃಶ್ಯಗಳನ್ನು ನೋಡುತ್ತಾ ನಾವಿಬ್ಬರೂ ಮರುಗಿದೆವು ಕೂಡ.


ಆ ದೇಶದ ದುರಾಡಳಿತ, ದುರ್ಬಲ ಸೈನ್ಯದ ಬಗ್ಗೆ ಹೇಳಿ ಮತ್ತು ಬಲಿಷ್ಠ ರಾಷ್ಟ್ರ ಉದಾಹರಣೆಗೆ ನಮ್ಮ ದೇಶ, ಸೈನ್ಯದ ಬಗ್ಗೆ ಹೆಮ್ಮೆ ಬರುವ ರೀತಿಯಲ್ಲಿ ಅವಳಿಗರ್ಥವಾಗುವಂತೆ ವಿವರಿಸಿದೆ. 


ತಕ್ಷಣ, ನಮ್ Soldiers (ಸೈನಿಕರು) ಎಷ್ಟು ಗ್ರೇಟ್ ಅಲ್ವಾ, ಪಪ್ಪಾ… ನಮ್ Soldiers ಇಲ್ಲ ಅಂದ್ರೆ ನಮಗೂ ಹಾಗೆ ಆಗುತ್ತಾ…? ಎಂದು ಭಯದಿಂದಲೇ ಕೇಳಿದಳು.


ಬ್ರಿಟಿಷ್ ಆಡಳಿತದ ಭಾರತ ದೇಶ ಸ್ವಾತಂತ್ರಪೂರ್ವ ಹೆಚ್ಚು ಕಡಿಮೆ ಅದೇ ರೀತಿ ಇತ್ತು. ಲಕ್ಷಾಂತರ ಮಂದಿಯ ಹೋರಾಟದ ಫಲವಾಗಿ 1947 ಆಗಸ್ಟ್ 14 ರ ರಾತ್ರಿ ಬ್ರಿಟಿಷರು ನಮ್ಮ ದೇಶ ಬಿಟ್ಟು ಹೋದರು. ಅದಕ್ಕೆ ನಾಳೆ 15 ರಂದು ಎಲ್ಲರೂ Independence Day (ಸ್ವಾತಂತ್ರ್ಯ ದಿನಾಚರಣೆ) ಆಚರಣೆ ಮಾಡುತ್ತೇವೆ ಎಂದು ಸರಳವಾಗಿಯೇ ವಿವರಿಸಿದೆ.


ವರ್ಷ 2015 ರಲ್ಲಿ ಸೇನೆಗೆ ಸಂಬಂಧಪಟ್ಟ One Rank One Pension (OROP) ಕಾಯ್ದೆ ಜಾರಿಯಾದ ಸಮಯವದು.

ನನ್ನ ಹಿರಿಯ ಭಾವ ಜೊತೆ ಮಾತಾನಾಡುವಾಗ ಅವರು ಕೇಳಿದರು "ರಾಘು… ಸೈನ್ಯ ಸೈನ್ಯ ಅಂತ ಇಷ್ಟು ಕೋಟಿಗಟ್ಟಲೆ ದುಡ್ಡು ಖರ್ಚು ಮಾಡ್ತಾರಲ್ಲ - ನಿಜವಾಗ್ಲೂ ಇಷ್ಟೊಂದು ಬೇಕಾ? ಕೋಟ್ಯಂತರ ರೂಪಾಯಿ ವಿಮಾನಗಳ ಖರೀದಿ, ಬಲಿಷ್ಟ ಸೈನ್ಯ ಮಾಡುವ ನೆಪದಲ್ಲಿ ಅದು-ಇದು ಅಂತ ದುಂದುವೆಚ್ಚ ಮಾಡ್ತಾರಲ್ಲ, ಇದೆಲ್ಲ ಅನಗತ್ಯ ರಾಷ್ಟ್ರೀಯ ವ್ಯಯ ಅನ್ನಿಸೋದಿಲ್ವಾ...?" ಎಂದು ಪ್ರಶ್ನಿಸಿದ್ದರು.


ಆಯಾ ರಾಷ್ಟ್ರಗಳು ಅವರ ಪಾಡಿಗೆ ಅವರು ಇರ್ತಾರೆ, ಸಾಮಾನ್ಯವಾಗಿ ಯುದ್ಧಗಳು ಸಂಭವಿಸುವುದಿಲ್ಲ. ಅಂದಮೇಲೆ ಸುಮ್ ಸುಮ್ನೆ ಏನಕ್ಕೆ ಇಷ್ಟೆಲ್ಲ ಅನಗತ್ಯ ಖರ್ಚು ಎನ್ನುವ ಭಾವನೆ ಅವರದ್ದು.


ಯಾವುದೇ ದೇಶದ ಸೇನೆ ಸದೃಢ-ಬಲಿಷ್ಠ ಇಲ್ಲದಿದ್ದಲ್ಲಿ ಪ್ರಗತಿ ಕಷ್ಟ ಸಾಧ್ಯವೇ ಸರಿ ಅಥವಾ ಮುಂದೊಂದು ದಿನ ಕುತಂತ್ರಿ ಪ್ರಬಲ ರಾಷ್ಟ್ರದಿಂದ ಆಕ್ರಮಣ ಕಟ್ಟಿಟ್ಟ ಬುತ್ತಿ.


ಬಲಿಷ್ಠ ಸೇನೆಯೂ ಕೂಡ ದೇಶದ ಸಂಪತ್ತು. ಅದಕ್ಕೆ ಬಳಸುವ ಹಣ ಅನಗತ್ಯ ವ್ಯಯ ಅಲ್ಲ, ಅದು ರಾಷ್ಟ್ರ ಬಲವರ್ಧನೆಗೆ ಮಾಡುವ ವಿನಿಯೋಗ ಎಂಬುದು ನನ್ನ ಅನಿಸಿಕೆ.

ನಿಮ್ಮ ದುಡಿಮೆ ನಿಮ್ಮದು.! 

ಜೀವನ ರೂಪಿಸಿಕೊಳ್ಳುವ ಆಯ್ಕೆ ನಿಮ್ಮದು.!

ಜೀವನ ನಡೆಸುವ ರೀತಿಯೂ ನಿಮ್ಮದೇ.!

ಇದೇ ಸ್ವಾತಂತ್ರ್ಯ…


ಹಲವಾರು ಸ್ವಾತಂತ್ರ್ಯ ಹೋರಾಟಗಾರರನ್ನ ಸ್ಮರಿಸುತ್ತಾರೆ ಧನ್ಯತೆಯಿಂದ ಹೇಳಿ -

"ಜೈ ಭಾರತ ಮಾತೆ…"



- ರಾಘವೇಂದ್ರ. ಜಿ. ಶ್ರೀರಾಮಯ್ಯ

9060660060





Comments

Post a Comment

ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಮನೋಜ್ಞ ಮಾದರಿ

ಅಪ್ಪಾ... Ex-MP ಎಂದರೇನು?

ಅಸಲಿ ರೈತ, ನಕಲಿ ಪ್ರೀತಿ.!

ರೈತರೆಲ್ಲ ಶ್ರೀಮಂತರಾಗುತ್ತಾರಂತೆ.!

ಸಾರ್ಥಕ ನಿವಾಸ

ಹೇಗಿದ್ದಾರೆ ಮೇಷ್ಟ್ರು..?