ಅತಿಯಾದ ಕನ್ನಡಾಭಿಮಾನದಿಂದ ಯಾಮಾರಿದ್ದೇನೆ.!

ಕನ್ನಡ, ಕನ್ನಡಿಗರು ಎಂದರೆ ನಮಗೆಲ್ಲರಿಗೂ ಪ್ರೀತಿ, ಅಭಿಮಾನ ಇದ್ದೇ ಇರುತ್ತೆ ಅಲ್ವಾ.
ಹಾಗಾದರೆ ನಿಮ್ಮ ಜೀವನದಲ್ಲಿ ಏನೇ ಕೆಲಸ ಕಾರ್ಯಗಳು ಆಗಬೇಕಿದ್ದರೆ ಎಲ್ಲವೂ ಕನ್ನಡಿಗರಿಂದಲೇ ಮಾಡಿಸಿಕೊಳ್ಳುತ್ತಿದ್ದೀರಾ?
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಶೇಕಡಾ 90 ರಷ್ಟು ಕನ್ನಡಿಗರಿಂದಲೇ ಆಗಬಹುದು. ಆದರೆ ನಗರ ಪ್ರದೇಶಗಳಲ್ಲಿ ಇದು ಸಾಧ್ಯವೇ ಇಲ್ಲ. 

ನನಗೆ ಅತಿಯಾದ ಕನ್ನಡ ಅಭಿಮಾನ ಇರುವ ಕಾರಣ ಸಾಮಾನ್ಯವಾಗಿ ಏನಾದರೂ ಕೆಲಸ ಕಾರ್ಯಗಳು ಮಾಡಿಸಬೇಕಿದ್ದರೆ ಸುಮಾರು ಕಡೆ ವಿಚಾರಿಸಿ ಬೆಲೆ ಸ್ವಲ್ಪ ಜಾಸ್ತಿ ಅನ್ನಿಸಿದರೂ ನಮ್ಮ ಕನ್ನಡದವರಿಗೆ ವಹಿಸುತ್ತಿದ್ದೆ. ನಂತರ ಕೆಲಸ ಸರಿ ಆಗದಿದ್ದಾಗ ಪೇಚಾಡಿದ್ದೀನಿ. ಇತ್ತೀಚೆಗಷ್ಟೇ ದುಬಾರಿ ವೆಚ್ಚದ ಕೆಲಸಗಳನ್ನು ಯಾಮಾರಿ ನಮ್ಮವರಿಗೆ ಕೊಟ್ಟು ಕೆಟ್ಟ ಅನುಭವ ಆಗಿದೆ ಕೂಡ.

ಕೆಲವರು ಬಂದು ನನಗೆ ಹೇಳಿದ್ದೂ ಉಂಟು - ಈ ತರಹದ ಕೆಲಸಗಳು "ಹಿಂದಿ ಹುಡುಗರು" ಭಯ-ಭಕ್ತಿಯಿಂದ ಚೆನ್ನಾಗಿ ಮಾಡುತ್ತಾರೆ, ಅವರಿಗೆ ಕೊಡಬೇಕಾಗಿತ್ತು. 
ಹಾಗಂತ ನಮ್ಮವರಿಗೆ ಕಲೆ ಇಲ್ಲ ಎಂದು ಹೇಳಲಾಗುವುದಿಲ್ಲ. ಒಂದಷ್ಟು ಕ್ಷೇತ್ರಗಳಲ್ಲಿ ನುರಿತ ನಿಪುಣರು ಸಹ ಇದ್ದಾರೆ.

ನಂತರ ನಾನು ಅರ್ಥೈಸಿಕೊಂಡಿದ್ದು ಹೀಗೆ - ಕಲೆಗೆ ಬೆಲೆ ಎಂಬಂತೆ ಕಲೆಗಾರನ ಆಯ್ಕೆಯಲ್ಲಿ ಭಾಷೆ, ಪ್ರಾಂತ್ಯ, ಇತ್ಯಾದಿಗಳು ಅಡ್ಡಿಯಾಗಬಾರದು. ಇದು ತಪ್ಪು ಎಂಬುದು ನನ್ನ ಭಾವನೆ.

ನಾವೆಲ್ಲರೂ ಮಾತಾಡ್ತೀವಿ ಅಲ್ವಾ - "ಎಲ್ಲಾ ಕಡೆಯಲ್ಲೂ ಅನ್ಯ ಭಾಷಿಕರೇ ತುಂಬಿಕೊಂಡಿದ್ದಾರೆ" ಅಂತ. ಹೌದು, ನಗರ ಪ್ರದೇಶಗಲ್ಲಿ ಹೆಚ್ಚು ಕಾಣುತ್ತೇವೆ. 

ಉದಾಹರಣೆಗೆ, ನನ್ನದೊಂದು ಅಂಗಡಿ ಮನೆ ಇದ್ದರೆ ವಲಸಿಗನಿಗೆ 15-20 ಸಾವಿರಕ್ಕೆ ಬಾಡಿಗೆಗೆ ಕೊಟ್ಟು ಆರಾಮಾಗಿ ಒಡ್ಡಾಡಿಕೊಂಡು ಮಜಾ ಮಾಡ್ತೀನಿ. ಬಾಡಿಗೆದಾರ ಆ ಅಂಗಡಿಯಲ್ಲಿ ಲಕ್ಷಗಟ್ಟಲೆ ದುಡೀತಾನೆ. ಇದು ವಾಸ್ತವ ಪರಿಸ್ಥಿತಿ.
ನಮ್ಮ ಜನರದ್ದು ರಾಜತ್ವ ಗುಣಗಳುಅನ್ಯರಿಂದ ಕೆಲಸ ಮಾಡಿಸಿಕೊಳ್ಳೋಕೆ ಹೆಚ್ಚು ಬಯಸುತ್ತೇವೆ ಇದು ನಮ್ಮ ಜನರ ತಾಕತ್ತು ಮತ್ತು ಒಂದು ರೀತಿ ಒಳ್ಳೆಯದೇ ಕೂಡ.

ಹಾಗಾದರೆ ನಮ್ಮ ರಾಜ್ಯದಲ್ಲಿ ವಲಸಿಗರು ಇರುವುದು ಒಳ್ಳೆಯದೇ ಅಲ್ವಾ? ವಲಸಿಗರು ಹೆಚ್ಚು ಜನ ಇದ್ದಾರೆ ಎಂದ ಮಾತ್ರಕ್ಕೆ ಕನ್ನಡ ಕ್ಷೀಣಿಸುವುದಿಲ್ಲ. ಪರಿಣಾಮ, ನಗರ ಪ್ರದೇಶಗಳಲ್ಲಿ ಕನ್ನಡಿಗರ ಪಾರುಪತ್ಯ ಕಡಿಮೆ ಆದಂತೆ ಕಾಣಬಹುದು ಅಷ್ಟೇ. ಆದರೆ ನಾವುಗಳು ವ್ಯವಹರಿಸುವಾಗ ಕನ್ನಡ ಬಳಕೆ ಮಾಡಲೇಬೇಕು.

ಸರಿಗಮಪ ಕಾರ್ಯಕ್ರಮದಲ್ಲಿ ನಮ್ಮ ಹೆಮ್ಮೆಯ ಸಂಗೀತ ನಾಧಬ್ರಹ್ಮ ಹಂಸಲೇಖ ಸರ್ ರ ಹುಟ್ಟು ಹಬ್ಬದ ದಿನ ಅವರು ಕಣ್ಣಲ್ಲಿ ನೀರು ಹಾಕ್ಕೊಂಡು "ಕನ್ನಡವನ್ನ ಕಾಪಾಡಬೇಕು" ಅಂತ ಹೇಳ್ತಾರೆ ನೋಡಿ.

ನಮ್ಮ ಹಿರಿಯರು ಪಾಲನೆ ಮಾಡ್ತಿದ್ದ ಜಾನಪದ, ಸಂಗೀತ, ನೃತ್ಯ-ನಾಟಕ, ಯಕ್ಷಗಾನ, ಸಂಸ್ಕೃತಿ, ಆಚಾರ-ವಿಚಾರಗಳನ್ನ ನಮ್ಮ ಪೀಳಿಗೆಯಲ್ಲಿ ಪಾಲನೆ ಮಾಡ್ತಾ ಇದ್ದೀವಾ? 
ಸಂಕ್ರಾಂತಿ, ಯುಗಾದಿ ಹಬ್ಬಗಳು ನಮ್ಮ ಬಾಲ್ಯದಲ್ಲಿ ಆಚರಿಸದ ರೀತಿ ಹೇಗಿದ್ದವು? 

ಸ್ಪರ್ಧೆಯ ರೀತಿ ಜೀವನ ಓಡಿಸುತ್ತಿರುವ ನಾವುಗಳು, ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ದ್ವೇಷ, ಅಸೂಯೆ, ಬಾಂಧವ್ಯ ಇಲ್ಲ, ಸಂಬಂಧಗಳು ಮರೀಚಿಕೆಯಾಗಿದೆ.
 
ಗ್ರಾಮದಲ್ಲಿ ಒಂದು ಗುಂಪು ನಾಟಕ ಆಯೋಜಿಸಿದರೆ ಮತ್ತೊಂದು ಗುಂಪು ನಾಟಕ ವೀಕ್ಷಣೆಗೂ ಸಹ ಬರೋದಿಲ್ಲ - ಎಲ್ಲಿ ಬಂದು ತಲುಪಿದ್ದೀವಿ ರೀ ನಾವುಗಳು...? ಇಂತಹ ಮನಸ್ಥಿತಿವುಳ್ಳ ನಾವುಗಳು ಹಿಂದಿನ ರೀತಿಯ ಆಚರಣೆಗಳು ಸಾಧ್ಯವೇ ಇಲ್ಲ ಬಿಡಿ. 

ನಮ್ಮ ಹಂಸಲೇಖ ರವರು ಕಣ್ಣಲ್ಲಿ ನೀರು ಹಾಕ್ಕೊಂಡು ಹೇಳಿದರ ಭಾವಾರ್ಥ ಇದೇನೇ. ಕನ್ನಡ ಎಂದರೆ ಬರೀ ಭಾಷೆ ಅಲ್ಲ, ಬದಲಾಗಿ ಮೇಲೆ ತಿಳಿಸಿದ ಹಾಗೆ ನಮ್ಮ ಹಿಂದಿನ ಪೀಳಿಗೆಯಿಂದ ಬಂದಿರುವ ಶ್ರೇಷ್ಠತೆಗಳನ್ನ ಪಾಲನೆ ಮಾಡಿಕೊಂಡು ಮುಂದಿನ ಪೀಳಿಗೆಗೂ ನಮ್ಮ ನಾಡಿನ ಇತಿಹಾಸ, ಮಹತ್ವ ತಿಳಿಯಪಡಿಸಬೇಕು.

ಹಾಗೆಯೇ, ಎಲೆಮರೆಯಂತೆ ಸಾಗುತ್ತಿರುವ "ಹಿಂದಿ ಭಾಷೆ ಹೇರಿಕೆಯ" ಉದ್ದೇಶವನ್ನ ತೀವ್ರವಾಗಿ ವಿರೋಧಿಸಲೇ ಬೇಕಾಗಿದೆ. ಈ ವಿಷಯ ನನಗೆ ಅಸಂಭದ್ದ, ನಂಗ್ಯಾಕೆ ಬೇಕು ಎಂದು ಕುಳಿತರೆ ಮುಂದಿನ ಪೀಳಿಗೆಗೆ "ಎಲ್ಲಾ ಮಾಯ... ಜೊತೆಗೆ ಕನ್ನಡವೂ ಮಾಯ..." ಎಂದು ಭಜನೆ ಮಾಡುವ ಪರಿಸ್ಥಿತಿ ಬರುತ್ತದೆ. ಒಟ್ಟಾರೆ ನಮ್ಮಗಳ ಮನಸ್ಥಿತಿ ಬದಲಾಗಬೇಕಿದೆ.

ದೇಶ ಪ್ರೇಮದ ಅಮಲಿನಲ್ಲಿ ಕನ್ನಡ ಪ್ರೇಮ ಮರೆಯದಿರಿ.
🙏


- ರಾಘವೇಂದ್ರ. ಜಿ. ಶ್ರೀರಾಮಯ್ಯ
9060660060                




Comments

  1. Some part is correct, please who knows kannada also they don't speak with other person who also knew kannada. Laungage is for just communication but now people are thinking its prestige

    ReplyDelete
  2. Very difficult to judge.. If every outsider learn kannada then its really good..

    ReplyDelete
  3. Nanna annisike Namma bhaashe na preethsi namm janaru kasta dalli idaaga sahaaya Maadi.

    ReplyDelete
  4. ನಮ್ಮಲ್ಲಿನ "ಬರಿದಾದ ಭಾಷಾ ಪ್ರೇಮ ಬಿಟ್ಟು" ಎಲ್ಲದರಲ್ಲೂ ಮುನ್ನುಗುವ,,ಮನಸ್ಥಿತಿ ಬರಬೇಕು, ಕೇವಲ ನವಂಬರ್ ಕನ್ನಡಿಗರಾಗದೆ,,, ಕನ್ನಡ ಕಲಿ ಸುವಂತಾಗಬೇಕು,,

    ReplyDelete

Post a Comment

ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಮನೋಜ್ಞ ಮಾದರಿ

ಅಪ್ಪಾ... Ex-MP ಎಂದರೇನು?

ಅಸಲಿ ರೈತ, ನಕಲಿ ಪ್ರೀತಿ.!

ರೈತರೆಲ್ಲ ಶ್ರೀಮಂತರಾಗುತ್ತಾರಂತೆ.!

ಸಾರ್ಥಕ ನಿವಾಸ

ಹೇಗಿದ್ದಾರೆ ಮೇಷ್ಟ್ರು..?