ವಾಹನ ವಿಮೆ ನೀತಿಗಳು ಸರಿಯಾಗಿಲ್ಲ
ನಮ್ಮ ದೇಶದಲ್ಲಿರುವ ವಾಹನ ವಿಮೆ ನೀತಿಗಳು ಸರಿಯಾಗಿಲ್ಲ ಎಂಬುದು ನನ್ನ ಅನಿಸಿಕೆ. ಕಾರಣ ಇಷ್ಟೇ;
ಕಡಿಮೆ ಮೊತ್ತದ ಕಾರು -> ವಿಮೆ ಮೊತ್ತ ಕಡಿಮೆ -> ಅಸುರಕ್ಷಿತ
ದುಬಾರಿ ಮೊತ್ತದ ಕಾರು -> ವಿಮೆ ಮೊತ್ತ ಹೆಚ್ಚು -> ಸುರಕ್ಷಿತ
ಇತ್ತೀಚೆಗಷ್ಟೇ ನಡೆದ ಕಾರು ಅಪಘಾತ ದಲ್ಲಿ ನಟ ಜಗ್ಗೇಶ್ ರವರ ಪುತ್ರ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದಾರೆ - ಅದು ಎಲ್ಲರಿಗೂ ಸಮಾಧಾನರಕರ ವಿಷಯ. ಬಚಾವಾಗಲು ಮುಖ್ಯ ಕಾರಣ ಅದು ಸುರಕ್ಷಿತ ಕಾರು ಹಾಗೂ "ಕಾರಿನ ಸೀಟ್ ಬೆಲ್ಟ್" ಹಾಕಿದ್ದರು.
ಹಾಗೆ ಸುಮ್ಮನೆ ಯೋಚಿಸಿ ನೋಡಿ, ಈ ಅಪಘಾತದಕ್ಕಿಂತ ಕಡಿಮೆ ಪ್ರಮಾಣದ ಅಪಘಾತಗಳಲ್ಲಿ ಅಸುರಕ್ಷಿತ ಕಾರುಗಳಿಂದ ಎಷ್ಟೋ ಅಮಾಯಕ ಜೀವಗಳು ಬಲಿಯಾಗಿವೆ.
ನನ್ನ ಆಲೋಚನೆಯ ಪ್ರಕಾರ, ಸುರಕ್ಷಿತ ಕಾರುಗಳ ವಿಮೆಯ ಮೊತ್ತ ಬಹಳ ಕಡಿಮೆ ಇರಬೇಕು. ಮತ್ತು, ಅಸುರಕ್ಷಿತ ಕಾರುಗಳ ವಿಮೆಯ ಮೊತ್ತ ಹೆಚ್ಚು ಇರಬೇಕು. ಈ ಹೆಚ್ಚುವರಿ ವಿಮೆ ಹಣವನ್ನು ಕಾರು ತಯಾರಕ ಸಂಸ್ಥೆಯೇ ತುಂಬಬೇಕು. ಭಾರಿ ಅಪಘಾತ ಸಂಭವಿಸಿ ಜನರ ಪ್ರಾಣ ಹೋಗುವಲ್ಲಿ ಕಾರು ತಯಾರಕರ ಪಾತ್ರ ಸಹ ಇರುತ್ತೆ.
ಹೌದು, ಇದನ್ನು ವಾದ ಮಾಡುವುದಾದರೆ ತುಂಬಾ ಆಯಾಮಗಳಲ್ಲಿ ಯೋಚಿಸಬಹುದು - ಬಡಜನ, ಮಧ್ಯಮ ವರ್ಗ ದುಬಾರಿ ವಿಮೆ ಮೊತ್ತ ಕಟ್ಟಲು ಸಾಧ್ಯವೇ? ಎಂದು.
ಜನಸಾಮಾನ್ಯರಿಗೆ ಹೊಡೆತ ಬೀಳದೆ ಇರುವ ಹಾಗೆ ಸರ್ಕಾರ ನೀತಿ ಬದಲಿಸಬಹುದು ಎಂಬುದಷ್ಟೇ ನನ್ನ ಅಭಿಪ್ರಾಯ.
- ರಾಘವೇಂದ್ರ. ಜಿ. ಎಸ್
Good thoughts
ReplyDelete