ಓದುಗರು Vs ನೋಡುಗರು
ಅರಿವಿದೆ...! ಓದುಗರು ತುಂಬಾ ಕಡಿಮೆ...!
ನನ್ನ ಆತ್ಮೀಯ ಗೆಳೆಯ ಜಗದೀಶ್ ಹೇಳಿದ - "ಲೋ ಮಗ ನೀನು ಬರೆಯುವ ಲೇಖನಗಳು ಓದಲು ಚೆಂದ, ಆದರೆ ನಮ್ಮ ಜನರಿಗೆ ಓದುವ ತಾಳ್ಮೆ ಇಲ್ಲ, ಎಷ್ಟು ಜನ ಓದುತ್ತಾರೋ?" ಎಂದು ಪ್ರಶ್ನಿಸಿದ.
ಹೌದು ನಿಜ - Facebook ನಲ್ಲಿ ಯಾವುದಾರೂ ಒಂದು ಫೋಟೋ ಹಾಕಿದರೆ ಸುಮಾರು Likes, Comments ಬರುತ್ತವೆ. ಆದರೆ ಲೇಖನ ಓದುಗರು ತುಂಬಾ ಕಡಿಮೆ.
ಜನರು ಈಗ ಮೊಬೈಲ್ ಹಿಡಿದುಬಿಟ್ಟರೆ ಸಾಕು Facebook, WhatsApp, Youtube ಗಳಲ್ಲಿ ತಮ್ಮ ಬೆರಳನ್ನು ಕ್ಷಣ ಕ್ಷಣಕ್ಕೂ ತೀಡುತ್ತಾ ಘಂಟೆಗಟ್ಟಲೆ ಸಮಯ ಕಳೆಯುತ್ತಾರೆ.
ಇದೆ ಚಟ ನಂದು ಕೂಡ ಇತ್ತು. ಅದನ್ನ ಅರಿತು Facebook app ನನ್ನ ಮೊಬೈಲ್ ನಲ್ಲಿ ಸಾಮಾನ್ಯವಾಗಿ ಇಡುವುದಿಲ್ಲ. ಏನಾದ್ರು ಪೋಸ್ಟ್ ಮಾಡಬೇಕಿದ್ರೆ install ಮಾಡಿ ಮತ್ತೆ delete ಮಾಡ್ತೀನಿ.
ಇದೆ ರೀತಿ ನಮ್ಮ ಆಫೀಸ್ ಗೆಳೆಯ ಅವಿನಾಶ್ ಕೂಡ. ಅವನು ಮೊಬೈಲ್ ಹಿಡಿದರೆ ಸಾಕು Facebook ನೋಡೋದ್ರಲ್ಲಿ ಮುಳುಗಿಬಿಡ್ತಿದ್ದ.
ಇಸವಿ 2018 ಅನ್ಸುತ್ತೆ - ಒಮ್ಮೆ ಕ್ಯಾಂಟೀನ್ ನಲ್ಲಿ ಕುಳಿತಿದ್ದಾಗ ಅವನ ಮೊಬೈಲ್ ತಗೊಂಡು ಹೇಳಿದೆ. "ಅವಿ, Facebook ಅಪ್ಲಿಕೇಶನ್ ನಿನ್ನ ಮೊಬೈಲ್ ನಿಂದ ಡಿಲೀಟ್ ಮಾಡ್ತೀನಿ" ಎಂದೇ. ಮುಗುಳ್ನಗುತ್ತ... ಮಾಡಿ ಎಂದ. ತಕ್ಷಣ ನಾನೇ ಸ್ವತಃ uninstall ಮಾಡಿ ಅವನ ಮೊಬೈಲ್ ವಾಪಾಸ್ ಕೊಟ್ಟೆ.
ಸುಮಾರು ಎರಡು ತಿಂಗಳ ನಂತರ ಒಮ್ಮೆ ಹಾಗೆ ಮಾತನಾಡುವಾಗ ಅವನು ಹೇಳಿದ "ರಾಘು - ನೀವ್ Facebook App ಡಿಲೀಟ್ ಮಾಡಿ 2 ತಿಂಗಳ ಮೇಲಾಯ್ತು, ಇನ್ನು install ಮಾಡಿಲ್ಲ. ಅದು ಇದ್ದಾಗ ಕೈನಲ್ಲಿ ಯಾವಾಗ್ಲೂ ಮೊಬೈಲ್ ಹಿಡಿತಾ ಇರ್ತಿದ್ದೆ, ಈಗ ಆ ಅಭ್ಯಾಸ ತಪ್ಪಿದೆ" ಎಂದು ಖುಷಿಯಿಂದ ಹೇಳಿದ.
ನಮ್ಮೂರಿಗೆ ನಾನು ಹೋದಾಗಲೆಲ್ಲ - ನನ್ನ ಅಣ್ಣ ನರೇಂದ್ರ, ಚಿಕ್ಕಪ್ಪನ ಮಗ ನವೀನ ಎಲ್ಲರು ಸೇರಿ ಏನಾದರು ಹಾಗೆ ಮಾತನಾಡುತ್ತ ಸುಮಾರು ಕಾಲ ಕಳೆಯುತ್ತಿದ್ದೆವು. ಇತ್ತೀಚೆಗಷ್ಟೇ ಒಮ್ಮೆ ಊರಿಗೆ ಹೋಗಿದ್ದೆ. ಮೊದಲಿನ ರೀತಿ ಎಲ್ಲರೂ ಕುಳಿತಿದ್ದೆವು, ಆದರೆ ಅವರಿಬ್ಬರು ಮೊಬೈಲ್ ನೋಡುತ್ತಾ ನನ್ನ ಜೊತೆ ಮಾತನಾಡುತ್ತಿದ್ದರು. ಹೆಚ್ಚು ಗಮನವಂತೂ ಮೊಬೈಲ್ ಕಡೆನೇ ಇತ್ತು ಬಿಡಿ. ಕೇಳಿದೆ "ಏನ್ ನೋಡ್ತಾ ಇದಿರಿ ಮೊಬೈಲ್ ನಲ್ಲಿ?" ಎಂದು. ನಗುತ್ತಾ Facebook ಎಂದು ಉತ್ತರಿಸಿದರು.
ಅಣ್ಣ Facebook ಅಪ್ಲಿಕೇಶನ್ ಡಿಲೀಟ್ ಮಾಡು ಎಂದೆ. ಮುಗುಳ್ನಗುತ್ತಾ ಬೇಡ ಬಿಡು ಎಂದು ಹೇಳುತ್ತಾ ಮೊಬೈಲ್ ಆಫ್ ಮಾಡಿ ಪಕ್ಕಕ್ಕಿಟ್ಟರು. ಮೇಲಿನ ಉದಾಹರಣೆ ಕೊಟ್ಟರು ಕೇಳಲಿಲ್ಲ - ಸುಮ್ಮನಾದೆ.
Facebook, WhatsApp, Youtube ನೋಡುವ ಸಮಯವನ್ನು ಮೊಬೈಲ್ ನಲ್ಲೆ ಯಾವುದಾದರೂ ಒಂದು ಲೇಖನ/ವಿಷಯ ಓದಲು ಪ್ರಯತ್ನಿಸಿ ನೋಡಿ. ಎಷ್ಟು ನಿಮಿಷಗಳ ಕಾಲ ನಿಮ್ಮ ಗಮನ, ಏಕಾಗ್ರತೆ ಅದರ ಕಡೆ ಇರುತ್ತೆ ಎಂಬುದನ್ನ ಗಮನಿಸಿ.
ವೀಡಿಯೋ ನೋಡಿ ಮಾಹಿತಿ ತಿಳಿದುಕೊಳ್ಳುವುದು ಬಲು ಸುಲಭ ಆದರೆ ಅದನ್ನ ಬಹುದಿನ ನೆನಪಿನಲ್ಲಿಡುವುದು ಬಲು ಕಷ್ಟ.
ತಾಳ್ಮೆಯಿಂದ ಓದಿ ಗ್ರಹಿಸಿದ್ದು ಮರೆಯೋದೆ ಇಲ್ಲ..!
- ರಾಘವೇಂದ್ರ. ಜಿ. ಎಸ್ / 9060660060
ಏನಪ್ಪ ಚೆನ್ನಾಗೇ ಬರಿತಿಯ.. ಗಂಟೆ ಗಟ್ಟಲೆ ಕೊರಿತಿಯ.. ಸರಿಯಾಗಿದೆ ನಿನ್ನ ಅನಿಸಿಕೆ ಮತ್ತೆ ಅನುಭವದ ಅಭಿಪ್ರಾಯ..
ReplyDeleteThank you for the complements
DeleteGood suggestion for me and all
ReplyDeleteತುಂಬಾ ಚೆನ್ನಾಗಿದೆ
ReplyDelete