ಆಯ್ಕೆಗಳು ಕೊಡಬಾರದಿತ್ತು.!
ನ್ಯೂಸ್ ನೋಡೋದ್ ಬಿಟ್ಟು ಅಪರೂಪಕ್ಕೆ ಬಿಗ್ ಬಾಸ್ ನೋಡ್ತಿದ್ದೆ. ಅಲ್ಲಿನ ಒಂದು ಕ್ಲಿಷ್ಟಕರ ಸನ್ನಿವೇಶ ನನಗೆ ಬಹಳ ಇಷ್ಟವಾಯಿತು.
ಬಿಗ್ ಬಾಸ್ ಮನೆಯಲ್ಲಿ ಈ ವಾರ ದಿವ್ಯಾ ಸುರೇಶ್ ಮನೆಯ ನಾಯಕಿಯಾಗಿದ್ದರು. ಬಿಗ್ ಬಾಸ್ ಸೂಚನೆಯ ಪ್ರಕಾರ ಆ ದಿನ 8 ಜನರ ಪೈಕಿ 5 ಜನ ಮಾತ್ರ ಆಟವಾಡಲು ಅವಕಾಶವಿತ್ತು.
ಅಲ್ಲಿ ಇರುವ ಎಲ್ಲಾ ಸ್ಪರ್ಧಿಗಳು ಅಸಾದ್ಯರು, ಒಬ್ಬರ ಕೋರಿಕೆಗೆ ಇನ್ನೊಬ್ಬರು ಜಗ್ಗೊದಿಲ್ಲ. ಈ ವಿಷಯ ಮನೆಯ ನಾಯಕಿ ದಿವ್ಯಾ ಸುರೇಶ್ ಗೆ ಅರಿವಿತ್ತು.
ಆದರೂ ಸ್ಪರ್ಧಿಗಳಿಗೆ 5 ನಿಮಿಷ ಸಮಯ ಕೊಟ್ಟು ನೀವೇ ಆ 5 ಜನ ಯಾರು ಅಡುತ್ತೀರಿ ಎಂದು ನಿರ್ಧಾರ ಮಾಡಿಕೊಳ್ಳಿ ಎಂದರು.
ಅವರಲ್ಲಿ ಒಮ್ಮತ ಮೂಡದಿದ್ದಾಗ, ನ್ಯಾಯಸಮ್ಮತ ಆಯ್ಕೆಗಾಗಿ ನಾಯಕಿ ದಿವ್ಯಾ 'ಟಾಸ್' ಹಾಕಿ ಹೆಸರುಗಳನ್ನ ಆಯ್ಕೆ ಮಾಡ್ತೀನಿ ಎಂದರು. ವಾವ್ಹ್ ಪರವಾಗಿಲ್ಲ... ಒಳ್ಳೆಯ ನಿರ್ಧಾರ ಅಂದುಕೊಂಡೆ.!
ಆದರೆ, ಅವರು 'ಟಾಸ್ ಆಯ್ಕೆ' ಬಗ್ಗೆ ಅಭಿಪ್ರಾಯ ಪಡೆಯಲು ಮುಂದಾಗಿ ಎಲ್ಲಾ ಸ್ಪರ್ಧಿಗಳಿಂದ ವಿರೋಧ ಬಂದ ಕೂಡಲೇ ಸುಮ್ಮನಾದರು.
ತಾವು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಮತ್ತು ಅವಕಾಶ ದಿವ್ಯಾ ಗೆ ಇದ್ದರೂ, ನಿರ್ಧರಿಸಲು 2 ಘಂಟೆಗಳ ಕಾಲ ಬೇಕಾಯಿತು.
ಆಗ ನನಗೆ ಅನ್ನಿಸಿತು - ಆಯ್ಕೆಗಳು ಕೊಡಬಾರದಿತ್ತು.!
ಹೌದು, ಮನುಷ್ಯನು ಆಯ್ಕೆಗಳ ಜೊತೆ ಆಟವಾಡುತ್ತಾನೆ. ಅದು ಸಹಜ ಗುಣ.
ಇದನ್ನ ಅರಿತಿರುವ ಸುಮಾರು ಕಂಪನಿಗಳು ಅಥವಾ ಮ್ಯಾನೇಜರ್ ಗಳು ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ಸಾಮಾನ್ಯವಾಗಿ ತಮ್ಮ ಉದ್ಯೋಗಿಗಳಿಗೆ ಆಯ್ಕೆಗಳನ್ನ ಕೊಡುವುದಿಲ್ಲ. ಬದಲಾಗಿ ಒಂದು ನಿರ್ಧಿಷ್ಟ ನೀತಿ ಅಥವಾ ನಿಯಮ ಜಾರಿಗೆ ತಂದು, ಬದಲಾವಣೆ ಏಕೆ ಎಂಬುದು ಮನವರಿಕೆ ಮಾಡಿಕೊಟ್ಟು - ಪಾಲಿಸಬೇಕು ಎನ್ನುತ್ತಾರೆ.
ಉದ್ಯೋಗಿಗಳು ಅದನ್ನ ಅವಿರೋಧವಾಗಿ ಎಲ್ಲರೂ ಪಾಲಿಸುತ್ತಾರೆ.
(Don't give options to employees when there is something important, because they may try to play around options).
ನಿಜ - ಆಯ್ಕೆಗಳು ಇದ್ದಾಗ ಅವುಗಳ ಹೋಲಿಕೆ-ವ್ಯತ್ಯಾಸ ಮಾಡುತ್ತಾ ಮನಸ್ಸು ಒಂದರಿಂದ ಇನ್ನೊಂದಕ್ಕೆ ಜಿಗಿಯುತ್ತಾ, ಆಯ್ಕೆಗಳ ಜೊತೆ ಆಟವಾಡುತ್ತಾ ಕಾಲ ಕಳೆಯುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ಆ ಸನ್ನಿವೇಶದಲ್ಲಿ ಆಗಿದ್ದೂ ಇದೇ ಅಲ್ವಾ...? ನೀವು ನಾಯಕ/ನಾಯಕಿ ಇದ್ದು ಆ ರೀತಿಯ ಪ್ರಸಂಗ ಬಂದರೆ, ನಿಮ್ಮ ನಿರ್ಧಾರ ಎನಿರುತ್ತಿತ್ತು...? ಸಾಧ್ಯವಾದರೆ ಕಮೆಂಟ್ ಮಾಡಿ 👇
- ರಾಘವೇಂದ್ರ. ಜಿ. ಶ್ರೀರಾಮಯ್ಯ
9060660060
ತುಂಬಾ ಚೆನ್ನಾಗಿ ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ. ಓದಲು ಖುಷಿಯಾಗುತ್ತೆ.
ReplyDeleteನಾನು ನಾಯಕಿ ಸ್ಥಾನದಲ್ಲಿ ಇದ್ದಿದ್ದರೆ ಸ್ಪರ್ಧಿಗಳ ಕೈಯಲ್ಲೇ ಟಾಸ್ ಹಾಕಿಸುತ್ತಿದ್ದೆ.
Good thoughts and write-up.
ReplyDeleteYes, very true people mentality to play wit options.
This comment has been removed by the author.
ReplyDeleteI would made first 5 in points to play, same way how Big boss select candidates for captaincy task.
ReplyDeleteಬಿಗ್ ಬಾಸ್ ನಲ್ಲಿ ಎಷ್ಟೋ ಸಲ ಲಕ್ ಮೇಲೆ ಕೆಲವು ನಿರ್ಧಾರ ಹಾಗೂ ಆಟಗಳು ನಿಶ್ಚಯ ಗೊಳುತ್ತೆ, ಅದೇ ಆದಾರದ ಮೇಲೆ ದಿವ್ಯ ಸುರೇಶ್ ಟಾಸ್ ಬದಲು ಚೀಟಿ ಹಾಕಿ 5 ಅಭ್ಯರ್ಥಿಗಳನ್ನು ತೆಗೆಯಬಹುದಾಗಿತ್ತು.
ReplyDeleteSo many candidates complained that toss was not good option as it would not choose exactly 5 ppl, that makes sense.
Nice
ReplyDeleteಟಾಸ್ ಬದಲು ಚೀಟಿ ಹಾಕಬಹುದಾಗಿತ್ತು. ಟಾಸ್ ನಲ್ಲಿ ನಿಶ್ಚಿತವಾಗಿ 5 ಅಭ್ಯಥಿಗಳ ಆಯ್ಕೆ ಆಗುವ ಸಾದ್ಯತೆ ಕಡಿಮೆ
ReplyDeleteಬಿಗ್ ಬಾಸ್ ನಲ್ಲಿ ಎಷ್ಟೋ ಸಲ ಸ್ಪರ್ಧಿಗಳ ಆಯ್ಕೆ ಲಕ್ ಮೇಲೆ ಆಧಾರಿತವಾಗಿರುತ್ತದೆ, ಉದಾಹಣೆಗೆ ಕ್ಯಾಪ್ಟೇನ್ಸಿ ಆಟಗಳು ಎಷ್ಟೋ ಬಾರಿ ಕೇವಲ ಅದೃಷ್ಟದ ಆಟ.
ಇಲ್ಲೂ ಸಹ ಎಲ್ಲ ಸ್ಪರ್ಧಿಗಳು ಆಡಲು ಇಚ್ಚಿಸಿದಾಗ, ಅದೇತರಹದ ಯಾವುದಾದರೂ ಸಣ್ಣ ಅಧೃಷ್ಠದ ಆಟ ಅಥವಾ ಚೀಟಿ ಹಾಕಿ ಆಯ್ಕೆ ಮಾಡಬೇಕಾಗುತ್ತದೆ.
Good lines raghu, sometimes people should not be given options.if they are applied they will do it.
ReplyDeleteWhether you give options or not, It is human mentality to make choices. It is always what they choose or want they will do that.
ReplyDeleteThere is no option ,our mind fixed for the given task.
ReplyDeleteಅಯ್ಕೆ ನಮ್ಮದು! ಅವಕಾಶ ಬೇರೆ
ReplyDelete