ಸಾಂಧರ್ಬಿಕ ಅಭಿಪ್ರಾಯ ಬದಲಾವಣೆ ಬಹು-ಮುಖ್ಯ

 ವರ್ಷ 2019 ಜುಲೈ ತಿಂಗಳಲ್ಲಿ ನಮ್ಮ ರಾಜ್ಯದ ಆಡಳಿತದಲ್ಲಿದ್ದ JDS-Congress ಮೈತ್ರಿ ಸರ್ಕಾರವನ್ನು ಬೀಳಿಸಲು BJP ನಾಯಕರು ಹರಸಾಹಸ ಮಾಡುತ್ತಿದ್ದ ದಿನಗಳಲ್ಲಿ, ಬಳ್ಳಾರಿ ಮೂಲದ ನನ್ನ ಒಬ್ಬ ಆತ್ಮೀಯ ಗೆಳೆಯ BJP ಸರ್ಕಾರ ರಚನೆ ಆಗಲೆಂದು ಆಶಿಸುತ್ತಿದ್ದ.

ಕಾರಣ ಇಷ್ಟೇ - BJP ಸರ್ಕಾರ ರಾಜ್ಯದಲ್ಲಿ ಈಗ ಬಂದರೆ ನಮ್ಮ ರಾಜ್ಯಕ್ಕೆ ಒಳ್ಳೆಯದಾಗುತ್ತೆ. ಏಕೆಂದರೆ ಕೇಂದ್ರದಲ್ಲೂ BJP ನೇ ಇದೆ. So, ನಮ್ಮ ರಾಜ್ಯಕ್ಕೆ ಕೇಂದ್ರದಿಂದ ಒಳ್ಳೆ Fund ಸಿಗುತ್ತೆ, ಒಳ್ಳೆ-ಒಳ್ಳೆ ಕೆಲಸಗಳು ಆಗ್ತಾವೆ ಅನ್ನೋ ಭಾವನೆ ಅವನದು.

ಮನುಷ್ಯನ ಸಹಜ ಗುಣ ತಪೋಕಲ್ಪಿತ ನಂಬಿಕೆ, ಭರವಸೆ - ಒಳ್ಳೆಯದೇ ಆಗುತ್ತೆ ಎಂಬ ಆಶಾಭಾವನೆ.

ಈಗ ಅದೇ ನನ್ನ ಗೆಳೆಯ ರಾಜ್ಯ ಸರ್ಕಾರದ ಇತ್ತೀಚಿನ ಕಾರ್ಯವೈಖರಿ, ಕರೋನ ನಿರ್ವಹಣೆ ವಿಫಲ, ಬಡವರ ನಿರ್ಲಕ್ಷ್ಯ ಇವೆಲ್ಲವನ್ನು ಮೆಲುಕು ಹಾಕುತ್ತಾ...

ಏನ್ರಿ ರಾಘು, BJP ಸರ್ಕಾರ ಬಂದು ಏನೋ ದಬ್ಬಾಕಿ ಬಿಡುತ್ತೆ ಅಂದುಕೊಂಡ್ರೆ ಏನ್ ಮಾಡ್ತಾ ಇದ್ದಾರೆ ರೀ ಇವರು, ಯಪ್ಪಾ... ಇದೆಂತಹ ದುರಾಡಳಿತ, ರೀ... ಎಂದ.
ಇವರು ಲೂಟಿ ಹೊಡೆಯೋದು ಬಿಟ್ರೆ ಬೇರೇನು ಮಾಡ್ತಿದ್ದಂಗೆ ಕಾಣ್ತಿಲ್ಲ ರೀ, ಛೇ... ಅಂತ ಬೇಸರ ವ್ಯಕ್ತ ಪಡಿಸುತ್ತ... CM ಬದಲಾಗುವುದೇ ಒಳ್ಳೇದು, ಈತ ರಾಜ್ಯಕ್ಕೆ ಏನೂ ಮಾಡಂಗಿಲ್ಲ ರೀ... ಎಂದು ಪರಿತಪಿಸುತ್ತಿದ್ದ.
ಹೆಚ್ಚು ಕಡಿಮೆ ಇದೇ ಅಭಿಪ್ರಾಯ ಇರುತ್ತೆ ಎಲ್ಲರದ್ದೂ ಕೂಡ.

ಸಾಂಧರ್ಬಿಕ ಅಭಿಪ್ರಾಯ ಬದಲಾವಣೆ ಬಹು-ಮುಖ್ಯ.

ಆದರೆ ಒಂದಿಷ್ಟು ಅರೆಬೆಂದ ವಿದ್ಯಾವಂತರು "ವ್ಯಕ್ತಿಗತ, ಪಕ್ಷಪರ ಅಂದಭಕ್ತಿ" ಹೊಂದಿರುತ್ತಾರೆ.
ರಾಜ್ಯದಲ್ಲಿ ದುರಾಡಳಿತ ಇದ್ದರೂ ಕೂಡ ತನ್ನ ನಾಯಕನನ್ನ ಸಮರ್ಥನೆ ಮಾಡುತ್ತಿರುತ್ತಾರೆ.
ಯಾವುದೇ ವ್ಯಕ್ತಿಯ ಬಗ್ಗೆ, ವಿಚಾರದ ಬಗ್ಗೆ ಅಂದ ಭಕ್ತಿ/ಭಾವನೆ ತುಂಬಾ ಕೆಟ್ಟದ್ದು ಅನ್ಸುತ್ತೆ, ಅಲ್ವಾ?
ಯಾರು/ಯಾವುದು ಸರಿ ಅಥವಾ ತಪ್ಪು ಎಂಬುದು ಇಲ್ಲಿ ನಾನು ವಿಮರ್ಶೆ ಮಾಡುತ್ತಿಲ್ಲ. ಅದು ಅವರವರಿಗೆ ಬಿಟ್ಟ ವೈಯುಕ್ತಿಕ ವಿಚಾರ/ನಿರ್ಧಾರ.

- ರಾಘವೇಂದ್ರ. ಜಿ. ಎಸ್




ನಿಮ್ಮ ಅನಿಸಿಕೆ-ಅಭಿಪ್ರಾಯ ಇಲ್ಲಿ ತಿಳಿಸಿ.👇

Comments

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಮನೋಜ್ಞ ಮಾದರಿ

ಅಪ್ಪಾ... Ex-MP ಎಂದರೇನು?

ಅಸಲಿ ರೈತ, ನಕಲಿ ಪ್ರೀತಿ.!

ಹೇಗಿದ್ದಾರೆ ಮೇಷ್ಟ್ರು..?

ಸಾರ್ಥಕ ನಿವಾಸ

ರೈತರೆಲ್ಲ ಶ್ರೀಮಂತರಾಗುತ್ತಾರಂತೆ.!