ಅಳೆದು ತೂಗಿದ್ದಾರ ಸಿದ್ದರಾಮಯ್ಯ ನವರು?

ಮಾಜಿ ಮಖ್ಯಮಂತ್ರಿ ಮಾನ್ಯ ಸಿದ್ದರಾಮಯ್ಯ ನವರ ಇತ್ತೀಚಿನ ಕೆಲವು ಹೇಳಿಕೆಗಳು ಹಾಗೂ ನಡವಳಿಕೆಗಳಿಂದ ಹಿಂದೂ ಧರ್ಮದ ಕೆಲವರ ಮನಸ್ಸಿಗೆ ಗಾಸಿ ಉಂಟುಮಾಡಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ವಲ್ಪ ಮಟ್ಟಿಗೆ ಹೊಡೆತ ಬೀಳುತ್ತೆ ಎಂಬುದು ಕೆಲವರ ಅನಿಸಿಕೆ ಕೂಡ. ಈ ಸತ್ಯ ಸಂಗತಿ ಕಾಂಗ್ರೆಸ್ ನ ಹಲವಾರು ನಾಯಕರಿಗೆ ಅರಿವಿದ್ದರೂ ಬಹಿರಂಗವಾಗಿ ಯಾವ ನಾಯಕರು ಹೇಳಿಕೊಳ್ಳಲು ಆಗುತ್ತಿಲ್ಲವಿರಬಹುದು ಅಥವಾ ಅದರ ಹಿಂದಿನ ಕಾಗುಣಿತವೇ ಬೇರೆ ಇರಬಹುದು.

ಹಾಗಾದರೆ, ಕೆಲವರಿಗೆ ಧರ್ಮ ವಿರೋಧಿ ಎನ್ನಿಸಬಹುದಾದ ಹೇಳಿಕೆಗಳಿಂದ ಪಕ್ಷಕ್ಕೆ ಹೊಡೆತ ಬೀಳಬಹುದು ಎಂಬುದರ ಬಗ್ಗೆ ಸಿದ್ದರಾಮಯ್ಯ ನವರಿಗೆ ಅರಿವು ಇರುವುದಿಲ್ಲವೇ?
 • ಈ ಸೂಕ್ಷ್ಮತೆಯ ಅರಿವು ಖಂಡಿತಾ ಇದ್ದೇ ಇರುತ್ತೆ.! ದಶಕಗಳ ರಾಜಕೀಯ ಜೀವನದಲ್ಲಿ ಹಲವಾರು ಏಳು ಬೀಳುಗಳನ್ನು ನೋಡಿ, ಇಡೀ ನಾಡಿನ ಜನರ ಭಾವನೆಗಳ ಜೊತೆ ಮಿಂದೆದ್ದು, ಕೋಟ್ಯಂತರ ಜನರ ಮನ ಗೆದ್ದಿರುವ ನಾಯಕ ಸಿದ್ದರಾಮಯ್ಯ ನವರಿಗೆ ಎಲ್ಲವೂ ಅರಿವಿರುತ್ತದೆ.
ಹಾಗಿದ್ದರೆ, ತನ್ನ ನೆಚ್ಚಿನ ಅಭಿಮಾನಿಗಳ "ಹೌದು ಹುಲಿಯಾ" ರವರ ಲೆಕ್ಕಾಚಾರ ಬೇರೆ ಏನಿರಬಹುದು?
 • ಮುಂಬರುವ 2023 ರ ವಿಧಾನಸಭಾ ಚುನಾವಣೆ ಸಿದ್ದರಾಮಯ್ಯ ನವರ ರಾಜಕೀಯ ಜೀವನದ ಕೊನೆಯ ಚುನಾವಣೆ ಸ್ಪರ್ಧೆ, ಎಂದು ಅವರೇ ಹೇಳಿದ್ದಾರೆ.
 • ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರು ತನ್ನನ್ನು ಸೋಲಿಸಲು ಬಿಜೆಪಿ, ಜೆಡಿಎಸ್ ಪಕ್ಷದವರು ಹಾಗೂ ಸ್ವಪಕ್ಷದ ಕೆಲವು ಹಿತಶತ್ರುಗಳು ಎಲ್ಲಿಲ್ಲದ ಕಸರತ್ತು ಮಾಡುತ್ತಾರೆ ಎಂಬ ಸಹಜ ಆಲೋಚನೆ ಅವರಿಗಿರುತ್ತೆ.
 • ಸ್ವಂತ ಮೈಸೂರು ಪ್ರಾಂತ್ಯದಲ್ಲಿ, ಅಥವಾ ಈಗಿರುವ ಬಾದಾಮಿ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸುವ ಧೈರ್ಯ ತೋರಲಾಗದಿರಬಹುದು. ಏಕೆಂದರೆ, ತಾನು ಗೆಲ್ಲಲು ಪ್ರಯತ್ನಿಸುವ 100 ಪಟ್ಟು ಹೆಚ್ಚು ತನ್ನನ್ನು ಸೋಲಿಸಲು ರಾಜಕೀಯ ವೈರಿಗಳು ಕಾಯುತ್ತಿದ್ದಾರೆ ಎಂಬ ಅರಿವು ಮಾನ್ಯ ಸಿದ್ದರಾಮಯ್ಯ ನವರಿಗೆ ಖಂಡಿತ ಇರುತ್ತದೆ.
ಈ ಎಲ್ಲಾ ರಾಜಕೀಯ ಕುತಂತ್ರ ಸವಾಲುಗಳನ್ನು ಎದುರಿಸಿ ತಾನು ಗೆಲ್ಲಲೇ ಬೇಕಾದರೆ ಬಲು ಸುರಕ್ಷಿತ ಕ್ಷೇತ್ರವೆಂದರೆ ಅತೀ ಹೆಚ್ಚು ಅಹಿಂದ ಮತದಾರರು ಇರುವ ಕ್ಷೇತ್ರಗಳು ಮಾತ್ರವೇ?
 • ಹೌದು.! ಎಂಬ ಲೆಕ್ಕಾಚಾರವನ್ನು ಸಿದ್ದರಾಮಯ್ಯ ನವರು ಈಗಾಗಲೇ ಮಾಡಿದ್ದಾಗಿದ್ದರೆ, ಇವರ ರಾಜಕೀಯ ಚತುರತೆಯ ಕಣದಲ್ಲಿ ಸವಾಲಿನ ಗೆಲುವು ಖಂಡಿತ ಎಂಬುದು ಅವರ ಚಾಣಾಕ್ಷತೆ ಇರಬಹುದು.
ತಾನು ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿರುವ ವ್ಯಕ್ತಿ ಧರ್ಮದ ಸೂಕ್ಷ್ಮ ವಿಷಯಗಳ ಪ್ರಸ್ತಾಪ ಮಾಡಿ ಆ ಧರ್ಮದ ಒಂದಿಷ್ಟು ಮತಗಳನ್ನು ಕಳೆದುಕೊಳ್ಳಲು ತಯಾರಿದ್ದಾರ? 
 • ಪರವಾಗಿಲ್ಲ.! ಎಂಬ ಭಾವನೆ ಅವರದಿದ್ದರೆ, ಅದರ ಹಿಂದಿನ ಲೆಕ್ಕಾಚಾರ ಹೀಗಿರಬಹುದು; ಕಾಂಗ್ರೆಸ್ ಪಕ್ಷದ ಕಟ್ಟಾಳುಗಳು ಯಾವುದೇ ಧರ್ಮೀಯರಿರಲಿ ಅವರ  ಮತಗಳು ಹೇಗಿದ್ದರೂ ಬಂದೆ ಬರುತ್ತವೆ. ತನ್ನ ವಿವಾದಿತ ಹೇಳಿಕೆಗಳಿಂದ ಬೆರಳೆಣಿಕೆಯಷ್ಟು ಮತಗಳನ್ನ ಮಾತ್ರ ಕಳೆದುಕೊಳ್ಳಬಹುದು. ಆದರೆ, ಬೇರೆ ಧರ್ಮಗಳ ಪರವಾಗಿ ಗಟ್ಟಿಯಾಗಿ ಒಬ್ಬ ನಾಯಕ ನಿಂತಿದ್ದಾನೆ ಎಂದು ಆ ಜನರಲ್ಲಿ ಪ್ರತಿಬಿಂಬತವಾದರೆ ಆ ಎಲ್ಲಾ ಧರ್ಮೀಯರ ಮತಗಳು ಬೇರೆ ಪಕ್ಷಕ್ಕೆ ಹೋಗದೆ ಕ್ರೂಡೀಕರಣವಾಗುತ್ತದೆ. ಅದು ಯಶಸ್ವಿಯಾದರೆ ಅಲ್ಲಿಯ ನಷ್ಟಕ್ಕಿಂತ ಇಲ್ಲಿಯ ಗಳಿಕೆಯೇ ಸಿಂಹಪಾಲು ಇರತ್ತೆ ಎಂಬ ಲೆಕ್ಕಾಚಾರವಿರಬಹುದು.
ದಶಕಗಳ ಕಾಲ ಜನರ ಒಡನಾಡಿ ಅರಿತು ಸೇವೆ ಮಾಡಿ ದೀಮಂತ ಹಿರಿಯ ನಾಯಕರೆನಿಸಿರುವ ಮಾನ್ಯ ಎಸ್.ಎಂ. ಕೃಷ್ಣ, ಎಚ್.ಡಿ. ದೇವೆಗೌಡ, ಯಡಿಯೂರಪ್ಪ, ಸಿದ್ದರಾಮಯ್ಯ ಇಂತವರು ತನ್ನ ರಾಜಕೀಯ ಜೀವನದ ಕೊನೆಯ ಚುನಾವಣೆಯಲ್ಲಿ ಸ್ಪರ್ಧಿಸಿದರೆ ರಾಜಕೀಯ ವೈಷಮ್ಯ ಮರೆತು ಒಮ್ಮತದಿಂದ ವಿರೋಧ ಪಕ್ಷದವರೇ ಗೆಲ್ಲಿಸಿಕೊಡಬೇಕು. ಜನರೇ ತಿರಸ್ಕರಿಸಿ ಸೋಲಿಸಿದರೆ ಗೌರವ ಎನಿಸುತ್ತೆ. ಆದರೆ, ಕುತಂತ್ರದಿಂದ ಸೋಲಿಸುವ ಕೆಟ್ಟ ಪದ್ಧತಿ ಇರಬಾರದು ಎಂಬ ವೈಯುಕ್ತಿಕ ಅನಿಸಿಕೆ. ದುರದೃಷ್ಟಕರ, ಆ ಸಂಸ್ಕೃತಿ ಈಗ ಸದ್ಯಕ್ಕೆ ರಾಜ್ಯದಲ್ಲಿ ಇಲ್ಲ ಬಿಡಿ. ಈಗಾಗಲೇ ಕೆಲವು ನಾಯಕರ ವಿಷಯದಲ್ಲಿ ರಾಜ್ಯ ಸಾಕ್ಷಿಯಾಗಿದೆ.

ಚುನಾವಣೆ 6 ತಿಂಗಳು ಇರುವಾಗ ಪ್ರತಿಯೊಬ್ಬ ರಾಜಕಾರಣಿಯ ಓಲೈಕೆಯ ಮಾತುಗಳು, ನಡವಳಿಕೆಗಳು ಬದಲಾಗುತ್ತವೆ. ತದನಂತರ ಅಧಿಕಾರಕ್ಕೆ ಯಾರೇ ಬಂದರೂ ಮುಂದಿನ 4.5 ವರ್ಷ ಬಡವರ ಅಭ್ಯೋದಯ, ರಾಜ್ಯಭಿವೃದ್ಧಿ ಮತ್ತು ಸಮಾಜದ ಸ್ವಾಸ್ತ್ಯ ಕಾಪಾಡಿಕೊಂಡು ಹೋದರೆ ಸಾಕು ಎಂಬ ಅಭಿಪ್ರಾಯ.
- ರಾಘವೇಂದ್ರ. ಜಿ. ಶ್ರೀರಾಮಯ್ಯ
 9060660060             

Comments

 1. Flow and Quality of the content is written very nicely in this article like a political analyst.

  ReplyDelete
 2. ಆದರೂ ನಾಲಿಗೆ ಹರಿಬಿಡಬಾರದು...ಒಬ್ಬ ಮಾಜಿ ಮುಖ್ಯಮಂತ್ರಿ ಬಾಯಲ್ಲಿ ಇಷ್ಟೊಂದು ದುರಂಕಾರದ ಮಾತುಗಳು ಬರಬಾರದು. ಧರ್ಮಕ್ಕಿಂತ ಮುಖ್ಯ ಸಂಸ್ಕಾರ.

  ReplyDelete
 3. Yes Sir... Seems to be an Master plan by ಸಿದ್ದರಾಮಯ್ಯ 👌

  ReplyDelete
 4. Deepa arogo munche joragi uriyutte ante. He is ending his career and that of congress.

  ReplyDelete
 5. ದುರಹಂಕಾರದ ಇನ್ನೊಂದು ಹೆಸರೇ *****

  ReplyDelete

Post a Comment

ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಅಪ್ಪಾ... Ex-MP ಎಂದರೇನು?

ಮನೋಜ್ಞ ಮಾದರಿ

ಅಸಲಿ ರೈತ, ನಕಲಿ ಪ್ರೀತಿ.!

ರೈತರೆಲ್ಲ ಶ್ರೀಮಂತರಾಗುತ್ತಾರಂತೆ.!

ಸಾರ್ಥಕ ನಿವಾಸ

ಹೇಗಿದ್ದಾರೆ ಮೇಷ್ಟ್ರು..?